ರಾಜ್ಯ

ಬರುವ ತಿಂಗಳಿನಿಂದ ಹಾಪ್ ಕಾಮ್ಸ್ ಮಳಿಗೆಯಲ್ಲೂ ಹಾಲಿನ ಉತ್ಪನ್ನಗಳು ಮಾರಾಟ

Nagaraja AB

ಬೆಂಗಳೂರು:  ಮಾರ್ಚ್ ತಿಂಗಳ ಮಧ್ಯ ಭಾಗದಿಂದ ಕೆಎಂಎಫ್ ಹಾಗೂ ನಂದಿನಿ ಹಾಲಿನ ಉತ್ಜನ್ನಗಳು ಬೆಂಗಳೂರಿನ  ಹಾಪ್ ಕಾಮ್ಸ್ ಮಳಿಗೆಗಳಲ್ಲೂ ದೊರೆಯಲಿವೆ.

ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದ ಕಂಪನಿ ಇದೀಗ ಬಾಟಲಿ ನೀರಿನ ವ್ಯವಹಾರಕ್ಕೂ ಧುಮುಕ್ಕಿದೆ. ಹಾಲು ಮೊಸರು ಮಾತ್ರವಲ್ಲದೇ, ಪನ್ನೀರು, ಲಸ್ಸಿ, ತುಪ್ಪ, ಮಜ್ಜಿಗೆ, ಐಸ್ ಕ್ರೀಮ್, ಬಾದಾಮಿ ಪೌಡರ್, ಜಮೂನ್, ಮತ್ತಿತರ ಹಾಲಿನ  ಉತ್ಪನ್ನಗಳು ಲಭಿಸಲಿದೆ.

ರಾಜ್ಯಾದ್ಯಂತ 12  ಸಾವಿರ ಹಾಲಿನ ಏಜಿನ್ಸಿಗಳಿವೆ. ಈ ಪೈಕಿ 4 ಸಾವಿರ ಬೆಂಗಳೂರಿನಲ್ಲಿವೆ. ಸ್ಟಾರ್ ಬಜಾರ್.ಬಿಗ್ ಬಜಾರ್ ಮತ್ತಿತರ ಮಳಿಗೆಗಳಲ್ಲೂ ಆನ್ ಲೈನ್ ಮಾರಾಟದಲ್ಲಿಯೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಎಂ.ಟಿ. ಕುಲಕರ್ಣೀ, ರಾಜ್ಯಾದ್ಯಂತ 1 ಸಾವಿರ ಕೆಎಂಎಫ್ ಮಳಿಗೆಗಳಿವೆ. ಪ್ರಮುಖ ಹಾಲಿನ ಒಕ್ಕೂಟಗಳ ಮೂಲಕ ಇಲ್ಲಿಗೆ ಹಾಲು ಪೂರೈಸಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರ ಲೀಟರ್ ಗೆ 5 ರೂ ಸಹಾಯದನ ಒದಗಿಸಿದ ನಂತರ ಹೆಚ್ಚಿನ ಪ್ರಮಾಣ ಹಾಲು ದೊರೆಯುತ್ತಿದೆ, ಪ್ರತಿದಿನ 65 ಲಕ್ಷ ಲೀಟರ್ ಹಾಲು ದೊರೆಯುತ್ತಿದೆ. ಕೆಲ ಸಂದರ್ಭಗಳಲ್ಲಿ 78 ಲಕ್ಷ ಲೀಟರ್ ಗೆ ಇದು ಹೆಚ್ಚಳವಾಗುತ್ತಿದೆ ಎಂದು ಹೇಳಿದರು.

ಪ್ರತಿದಿನ 55 ಲಕ್ಷ ಹಾಲು  ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲನ್ನು ಹಾಲಿನ ಉತ್ಪನ್ನಗಳಿಗೆ ಅಗತ್ಯವಿರುವ ಮಾರುಕಟ್ಟೆಗಳಿಗೆ  ಮಾರಾಟ ಮಾಡಲಾಗುತ್ತಿದೆ ಆದಾಗ್ಯೂ, ಹಾಲಿನ ಉತ್ಪನ್ನಗಳ ಮಾರಾಟಕ್ಕೂ ಸೂಕ್ತ ವ್ಯವಸ್ಥೆಇಲ್ಲದಿರುವುದರಿಂದ ಹಾಪ್ ಕಾಮ್ಸ್ ಮಳಿಗೆಗಳ  ನೆರವು  ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಹಾಪ್ ಕಾಮ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಾಲಿನ ಉತ್ಪನ್ನಗಳ ಸಂರಕ್ಷಣೆಗಾಗಿ ಶೀತಲಿಕರಣ ಸೌಲಭ್ಯ ಒದಗಿಸಲಾಗುವುದು,ಹಾಲಿನ ಉತ್ಪನ್ನಗಳ ಜೊತೆಗೆ ಹಣ್ಣು, ತರಕಾರಿಯೂ ಮಾರಾಟವೂ ಇಲ್ಲಿ ನಡೆಯಲಿದೆ ಎಂದರು.

ಬೆಂಗಳೂರಿನಲ್ಲಿ 25 ಹಾಪ್ ಕಾಮ್ಸ್ ಮಳಿಗೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಪ್ರತಿಕ್ರಿಯೆ ಗಮನಿಸಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು .ಮುಂದಿನ ವರ್ಷದಿಂದ ಕೆಎಂಎಫ್ ಸ್ವಂತ ಚಾಕೊಲೇಟ್ ಕಾರ್ಖಾನೆಯನ್ನು ಬೆಂಗಳೂರಿನಲ್ಲಿ ಹೊಂದಲಿದೆ ಎಂದು ಕುಲಕರ್ಣೀ ಹೇಳಿದ್ದಾರೆ.

SCROLL FOR NEXT