ಹಾವಿನೊಂದಿಗೆ ಬಾಲಕಿ ಆಕರ್ಷ 
ರಾಜ್ಯ

ಶಿರಸಿ: ಮೂರು ವರ್ಷದ ಈ ಬಾಲಕಿಗೆ ಹಾವುಗಳೇ ಆಟಿಕೆ!

ಹಾವು ಎಂದರೆ ಸಾಕು ಮಾರುದ್ದ ಹಾರುವವರ ನಡುವೆ ಶಿರಸಿಯ ಮೂರು ವರ್ಷದ ಬಾಲಕಿ ವಿಷಕಾರಿ ಹಾವುಗಳನ್ನೇ ತನ್ನ ಆಟಿಕೆ ಮಾಡಿಕೊಂಡಿದ್ದಾಳೆ.

ಶಿರಸಿ: ಹಾವು ಎಂದರೆ ಸಾಕು ಮಾರುದ್ದ ಹಾರುವವರ ನಡುವೆ ಶಿರಸಿಯ ಮೂರು ವರ್ಷದ ಬಾಲಕಿ ವಿಷಕಾರಿ ಹಾವುಗಳನ್ನೇ ತನ್ನ ಆಟಿಕೆ ಮಾಡಿಕೊಂಡಿದ್ದಾಳೆ.
ಹೌದು... ಶಿರಸಿಯ ಚಿಪಗಿ ಗ್ರಾಮದ ಪ್ರಶಾಂತ್ ಹುಲೇಕಲ್ ಹಾಗೂ ಸ್ವಾತಿ ಎಂಬವರ ಮಗಳಾದ ಆಕರ್ಷ ಹಾವಿಗಳೊಂದಿಗೆ ಸರಸವಾಡುತ್ತಾಳೆ. ಹಾವುಗಳೊಂದಿಗೆ ಸ್ನೇಹ ಬೆಳೆಸಿ ಅವುಗಳನ್ನೇ ತನ್ನ ಆಟಿಕೆ ಮಾಡಿಕೊಂಡಿದ್ದಾಳೆ.  ಇನ್ನು ಮಾತು ಕೂಡ ಸರಿಯಾಗ ಆಡದ ಬಾಲಕಿ ಹಾವುಗಳೊಂದಿಗೆ ಆಟವಾಡುವುದನ್ನು ನೋಡಿ ಎಂತಹವರಿಗೂ ಅಚ್ಚರಿಯಾಗುತ್ತದೆ. ವಿಷಕಾರಿಯಾದ ಕಾಳಿಂಗ ಸರ್ಪ, ನಾಗರಹಾವು, ಕೊಳಕಮಂಡಲ ಸೇರಿದಂತೆ 60 ಕ್ಕೂ ಹೆಚ್ಚು  ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. 
ಇಷ್ಟಕ್ಕೂ ಹಾವಿಗೂ ಈ ಬಾಲಕಿಗೂ ಏನು ನಂಟು ಎಂದು ಕೆದಕುತ್ತಾ ಹೋದರೆ ಅಲ್ಲಿ ಸಿಗುವುದು ಈ ಅಚ್ಚರಿ ಬಾಲಕಿಯ ತಂದೆ ಪ್ರಶಾಂತ್ ಹುಲೇಕಲ್.  ಪ್ರಶಾಂತ್ ಅವರು ಹವ್ಯಾಸಿ ಉರಗತಜ್ಞರಾಗಿದ್ದು, ಕಳೆದ 20 ವರ್ಷಗಳಿಂದ  ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಾರೆ. ಕಳೆದ 20 ವರ್ಷಗಳಲ್ಲಿ ಅವರು ಸುಮಾರು 12 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರಂತೆ. ಇದೇ ಕಾರಣಕ್ಕೆ ಈ ಹಾವನ್ನು ಹಿಡಿಯುವ ಹವ್ಯಾಸ ಅವರ ಪುತ್ರಿ ಆಕರ್ಷಗೂ  ಕರಗತವಾಗಿದೆ. 
ಬಾಲಕಿ ಆಕರ್ಷ ಚಿಕ್ಕ ಮಗುವಾಗಿದ್ದಾಗಿನಿಂದಲೇ ತಂದೆ ಹಾವುಗಳನ್ನ ಹಿಡಿಯುವುದನ್ನು ನೋಡುತ್ತಿದ್ದಳಂತೆ. ಹೀಗಾಗಿ ಹಾವುಗಳನ್ನು ಪಳಗಿಸುವುದರಲ್ಲಿ ಈಕೆಗೆ ತಂದೆಯೇ ಮೊದಲ ಗುರು. ಮನೆಯಲ್ಲಿ ಪ್ರತಿ ವರ್ಷ ನಾಗರ  ಪಂಚಮಿಯಂದು ನಿಜ ನಾಗರಹಾವಿಗೆ ತಪ್ಪದೇ ಪೂಜೆ ಮಾಡುತ್ತಾರೆ. ಹೀಗಾಗಿ ಇವೆಲ್ಲವೂ ಈ ಪುಟ್ಟ ಬಾಲಕಿಗೆ ಪ್ರಭಾವ ಬೀರಿದ್ದು, ಹಾವುಗಳೊಂದಿಗೆ ಸ್ನೇಹ ಬೆಳಸಿಕೊಳ್ಳುವಂತೆ ಮಾಡಿದೆ. 
ಇನ್ನು ಈ ಬಗ್ಗೆ ಹೆಮ್ಮೆಯಿಂದಲೇ ಮಾತನಾಡುವ ಆಕರ್ಷ ತಂದೆ ಪ್ರಶಾತ್ ಅವರು, ನನಗೆ ಹಾವುಗಳನ್ನು ಹಿಡಿಯುವುದು ತುಂಬಾ ಇಷ್ಟ. ಇದೇ ಕಾರಣಕ್ಕೆ ಅದನ್ನು ವೃತ್ತಿಯಾಗಿಸಿಕೊಂಡೆ. ಆಕರ್ಷ ಚಿಕ್ಕವಳಿದ್ದಾಗಲೇ ನಾನು ಹಾವು  ಹಿಡಿಯುತ್ತಿದ್ದನ್ನು ಗಮನಿಸುತ್ತಿದ್ದಳು. ಅಲ್ಲದೆ ಕೆಲವೊಮ್ಮೆ ಹಾವುಗಳನ್ನು ಕೈಗೆ ಕೊಡುವಂತೆ ಹಟ ಹಿಡಿಯುತ್ತಿದ್ದಳು. ಅವಳ ಹಟದಿಂದಾಗಿ ಅವಳಿಗೆ ಹಾವುಗಳನ್ನು ನೀಡುತ್ತಿದ್ದೆ. ಕ್ರಮೇಣ ಅದು ಅಭ್ಯಾಸವಾಗಿ ಹೋಯಿತು. ಈಗ ಎಲ್ಲ  ಬಗೆಯ ಹಾವುಗಳನ್ನು ಹಿಡಿದುಕೊಂಡು ಆಕೆ ಆಟವಾಡುತ್ತಾಳೆ ಎಂದು ಹೇಳಿದ್ದಾರೆ.
ಒಟ್ಟಾರೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಈ ಚಿಕ್ಕ ಪೋರಿಯ ಈ ಹಾವಿನ ಸಲುಗೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ