ರಾಜ್ಯ

ಬೆಂಗಳೂರಿಗೆ ಮತ್ತೆ ಕಾಲಿಟ್ಟ ಹಕ್ಕಿ ಜ್ವರ, ಜನರಿಗೆ ಆರೋಗ್ಯ ಅಧಿಕಾರಿಗಳ ಎಚ್ಚರಿಕೆ

Raghavendra Adiga
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಬೆಂಗಳೂರಿನ ಕನಕಪುರ ರಸ್ತೆ ದಾಸರಹಳ್ಳಿಯ ಚಿಕನ್ ಸೆಂಟರ್ ನ ಕೋಳಿಗಳಲ್ಲಿ ಎಚ್5 ಎನ್1 ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದ್ದು ಅಂಗಡಿಯು ಡಿ.30ರಿಂದ ಬಾಗಿಲು ಮುಚ್ಚಿದೆ. ಅಂತೆಯೇ ಆ ಅಂಗಡಿ ಸುತ್ತಲಿನ ಒಂದು ಕಿಮೀ ವ್ಯಾಪ್ತಿಯಲ್ಲಿ ಇದ್ದ ಎಲ್ಲಾ ಚಿಕನ್ ಶಾಪ್ ಗಳೂ ಮುಚ್ಚುವಂತೆ ಆರೋಗ್ಯ ಇಲಾಖೆ ಸೂಚಿಸಿದೆ
ದಾಸರಹಳ್ಳಿ ಕೆಜಿಎನ್ ಕೋಳಿ ಅಂಗಡಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು ಕಳೆದ ವಾರ ಅಂಗಡಿ ಮಾಲೀಕರು ತಮಿಳುನಾಡಿನಿಂದ 15 ಕೋಳಿಗಳನ್ನು ತರಿಸಿದ್ದರು. ಅವುಗಳಲ್ಲಿ ನಾಲ್ಕರಿಂದ ಐದು ಕೋಳಿಗಳು ಸಾವನ್ನಪ್ಪಿದ್ದು  ಹೀಗೆ ಮೃತಪಟ್ಟ ಕೋಳಿಗಳನ್ನು ಪರೀಕ್ಷೆ ನಡೆಸಿದಾಗ ಹಕ್ಕಿ ಜ್ವರ ಇರುವುದು ಖಚಿತವಾಗಿದೆ.
ಬಿಬಿಎಂಪಿ ಮೇಯರ್ ಸೇರಿ ಪಾಲಿಕೆ ಆರೋಗ್ಯ ಅಧಿಕಾರಿಗಳು ಈ ಕುರಿತಂತೆ ಜನ ಜಾಗೃತರಾಗಿರಬೇಕೆಂದು ತಿಳಿಸಿದ್ದಾರೆ. ಅಲ್ಲದೆ ಹೊರರಾಜ್ಯಗಳಿಂದ ಕೋಳಿಗಳನ್ನು ತರದಂತೆ ಸೂಚನೆ ನೀಡಿದ್ದಾರೆ.
SCROLL FOR NEXT