ಸುದೀಪ್ 
ರಾಜ್ಯ

ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿಯಲ್ಲಿ ಕಿಚ್ಚಾ ಸುದೀಪ್ ಫೋಟೊ ಬಳಸಿಕೊಂಡ ಭೂಪ!

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ್ ಕಛೇರಿಯಲ್ಲಿ ಸುದೀಪ್ ಭಾವಚಿತ್ರವಿರುವ ಜಾತಿ ಪ್ರಮಾಣ ಪತ್ರಕ್ಕಾಗಿ...

ಮುದ್ದೇಬಿಹಾಳ: ಕನ್ನಡದ ಪ್ರಖ್ಯಾತ ನಟ ಕಿಚ್ಚ ಸುದೀಪ್ ವಿಜಯಪುರ ಜಿಲ್ಲೆ ಮುದ್ದೇಬಿಹಾಳದಾಲ್ಲಿ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದರೆ ಅಶ್ಚರ್ಯವೇ?
ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ್ ಕಛೇರಿಯಲ್ಲಿ ಸುದೀಪ್ ಭಾವಚಿತ್ರವಿರುವ ಜಾತಿ ಪ್ರಮಾಣ ಪತ್ರಕ್ಕಾಗಿನ ಅರ್ಜಿ ಬಂದಿದ್ದು ಅದನ್ನು ಕಂಡ ಅಧಿಕಾರಿಗಳು ಕ್ಷಣ ಕಾಲ ಕಕ್ಕಾಬಿಕ್ಕಿಯಾಗಿದ್ದರು. 
ಘಟನೆ ವಿವರ: ಅಸಲಿಗೆ ಇಲ್ಲಿ ನಟ ಸುದೀಪ್ ಚಿತ್ರ ಹಾಕಿ ವ್ಯಕ್ತಿಯೊಬ್ಬರು ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾಲತವಾಡ ಹೋಬಳಿಯ ವಿರೇಶನಗರ ನಿವಾಸಿ ಸಿದ್ದಲಿಂಗಪ್ಪ ಕೋಳೂರ ಎನ್ನುವವರು ಈ ಅರ್ಜಿ ಸಲ್ಲಿಸಿದ್ದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಾತಿ ಪ್ರಮಾಣಪತ್ರಕ್ಕಾಗಿ ಈ ಅರ್ಜಿ ಸಲ್ಲಿಕೆಯಾಗಿದೆ.
ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರ ಫೊಟೋ ಹಾಕುವುದು ಕಡ್ಡಾಯವಾಗಿದೆ. ನಾಗಬೇನಾಳದಲ್ಲಿ ಹೊಸದಾಗಿ ಸಾಮಾನ್ಯ ಸೇವಾಕೇಂದ್ರ ಪ್ರಾರಂಭಿಸಿದ್ದ ಸಿದ್ದಲಿಂಗಪ್ಪ ಕೋಳೂರ ತಾವೇ ಅರ್ಜಿ ಸಿದ್ಧ ಪಡಿಸಿ ಅದಕ್ಕೆ ಬೇಕಾದ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರವನ್ನ ತಯಾರಿಸಿದ್ದಾರೆ. ಆ ನಂತರ ತಾವು ತಮ್ಮ ಚಿತ್ರದ ಬದಲು ಪ್ರಾಯೋಗಿಕವಾಗಿ ಸುದೀಪ್ ಚಿತ್ರ ಹಾಕಿದ್ದಾರೆ. ಮತ್ತು ಅದೇ ಮಾದರಿಯಲ್ಲಿ ನಾಡಕಚೇರಿಗೆ ಆನ್‍ಲೈನ್‍ನಲ್ಲಿ ಕಳಿಸಲಾಗಿದೆ.
ತಹಶೀಲ್ದಾರರ ಕಛೇರಿಯಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿ ನೋಡಿದಾಗ ಸುದೀಪ್ ಫೋಟೋ ಕಂಡು ಬಂದಿದೆ. ಇದನ್ನು ಕಂಡ ಉಪ ತಹಶೀಲ್ದಾರ್ ಸುದೀಪ್ ಫೋಟೋ ಹೇಗೆ ಬಂತು ಎಂದು ತನಿಖೆ ನಡೆಸುವಂತೆ  ಬಸವರಾಜ ಭದ್ರಣ್ಣ ಅವರಿಗೆ ಹೇಳಿದ್ಡಾರೆ. ಹಾಗೆ ತನಿಖೆ ನಡೆದಾಗ ಭಾವಚಿತ್ರ ಬದಲಾದ ಪ್ರಸಂಗ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್