ರಾಜ್ಯ

ಬೆಂಗಳೂರು: ವಿದ್ಯುತ್ ಆಘಾತದ ಬಳಿಕ ಚರಂಡಿಗೆ ಬಿದ್ದ ಮಹಿಳೆ ಸಾವು

Raghavendra Adiga
ಬೆಂಗಳೂರು: ವಿದ್ಯುತ್ ಆಘಾತದ ಕಾರಣ ಪಕ್ಕದಲ್ಲೇ ಇದ್ದ ತೆರೆದ ಚರಂಡಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಗ್ಗೆರೆ ಬಳಿಯ ರಾಜಗೋಪಾಲನಗರದಲ್ಲಿ ನಡೆದಿದೆ.
ವಿದ್ಯುದಾಘಾತದಿಂದ ಮಹಿಳೆ ಮೃತಪಟ್ಟಿದ್ಡಾರೆ, ಆದರೆ ಆಕೆಯ ಕುಟುಂಬದವರು ಆಸ್ತಿ ವಿವಾದದ ಕಾರಣ ಅವರ ಸಂಬಂಧಿಕರಿಂದ ಈ ಕೃತ್ಯ ನಡೆದಿದೆ. ಇದೊಂದು ಹತ್ಯಾ ಪ್ರಕರಣ ಎಂದು ಆರೋಪಿಸಿದ್ದಾರೆ.
ಮೃತರನ್ನು ಭಾಗ್ಯಮ್ಮ(49) ಎಂದು ಗುರುತಿಸಲಾಗಿದ್ದು ಈಕೆ ರಾಜಗೋಪಾಲ್ನಗರದಲ್ಲಿನ ಹೆಗ್ಗರಹಳ್ಳಿ ನಿವಾಸಿಯಾಗಿದ್ದರು. ತನ್ನ ಆರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಈಕೆ ಮಧ್ಯಾಹ್ನ ವೇಳೆಯಲ್ಲಿ ಮೋಟಾರ್ ಪಂಪ್ ಆನ್ ಮಾಡಲು ಬಂದಾಗ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಆ ವೇಳೆ  ಆಕೆಯ ಮನೆಯ ಪಕ್ಕದಲ್ಲಿ ಚರಂಡಿಯಲ್ಲಿ ಬಿದ್ದಿದ್ದಾರೆ. ನೆರೆಹೊರೆಯವರು ಹಾಗೆ ಚರಂಡಿಯಲ್ಲಿ ಬಿದ್ದಿದ್ದ ಭಾಗ್ಯಮ್ಮನನ್ನು ಗುರುತಿಸಿ ಸೋಲದೇವನಹಳ್ಳಿ ಆಸ್ಪತ್ರೆಗೆ ದಾಖಲಿಸ್ದ್ದಾರೆ. ಅಲ್ಲಿ ಆಕೆ ಮೃತಪಟ್ಟಿದ್ದಾರೆಂದು ಘೋಷಿಸಾಲಾಗುಇದೆ.
"ಭಾಗ್ಯಮ್ಮ ಏಳು ವರ್ಷಗಳ ಹಿಂದೆ ಕಾಣೆಯಾದ ನರಸಿಂಹಯ್ಯ ಅವರ ಎರಡನೇ ಪತ್ನಿ. ಅವರ ಮೊದಲ ಹೆಂಡತಿ ಲಲಿತಾ ನಮ್ಮೊಂದಿಗೆ ಆಸ್ತಿಯ ವಿಚಾರದಲ್ಲಿ ಜಗಳ ತೆಗೆದಿದ್ದಾಳೆ. ಇತ್ತೀಚೆಗೆ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿತ್ತು. ಲಲಿತಾಳ ಮಕ್ಕಳಾದ ನರಸಿಂಹ, ಸಾವಿತ್ರಿ, ಶಿವಣ್ಣ, ಪುಟ್ಟರಾಜು, ಗೌರಿ ಮತ್ತು ದೊಡ್ಡ ಅವರು ಇದರಿಂದ ಅಸಂತುಷ್ಟರಾಗಿದ್ದರು. ಇದೇ ಕಾರಣಕ್ಕೆ ಅವರು ಭಾಗ್ಯಮ್ಮ ಮೇಲೆ ದಾಳಿ ಮಾಡಿದ್ದರು. ಮತ್ತು ಆಕೆಯನ್ನು ಚರಂಡಿಗೆ  ತಳ್ಳಿದರು. ಅವಳ ಕೈ ಮತ್ತು ತಲೆಯ ಮೇಲೆ ಗಾಯದ ಗುರುತುಗಲೀಏ, ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಸಹೋದರ ಈ ಘಟನೆಯನ್ನು ನೋಡಿದ್ದಾನೆ. ಅವರು ಆರು ಜನರಿಂದಲೇ ನಮ್ಮ ತಾಯಿ ಸತ್ತಿದ್ದಾಳೆ" ಎಂದು ಭಾಗ್ಯಮ್ಮ ಅವರ ಪುತ್ರ ಸಂಪೂರ್ಣ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
SCROLL FOR NEXT