ರಾಜ್ಯ

ತುಂಗಭದ್ರಾದಿಂದ 3.5 ಟಿಎಂಸಿ ನೀರು; ತೆಲಂಗಾಣ ಬಳಿ ರಾಜ್ಯ ಸರ್ಕಾರ ಮನವಿ

Manjula VN
ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿರುವ ತನ್ನ ಪಾಲಿನ 3.5 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡಲು ತೆಲಂಗಾಣ ರಾಜ್ಯದ ಬಳಿ ರಾಜ್ಯ ಸರ್ಕಾರ ಗುರುವಾರ ಮನವಿ ಮಾಡಿಕೊಂಡಿದೆ. 
ಈ ಕುರಿತಂತೆ ಮಾತನಾಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು, ಕೆಡಬ್ಲ್ಯೂಡಿಟಿ (ಕೃಷ್ಣಾ ನದಿ ನೀರು ನ್ಯಾಯಮಂಡಳಿ) ನಿಯಮದ ಪ್ರಕಾರ ರಾಯಚೂರು ಬಳಿಯಿರುವ ರಾಜೋಳಿಬಂಡಾ ತಿರುವ ಯೋಜನೆಯೆಡಿ ತೆಲಂಗಾಣ ರಾಜ್ಯದಲ್ಲೆ 3.501 ಟಿಎಂಸಿ ನೀರನ್ನು ಬಿಡಬೇಕು. ಈ ಬಾರಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಉಭಯ ರಾಜ್ಯಗಳಲ್ಲಿ ನೀರಿನ ಅಭಾವ ಪರಿಸ್ಥಿತಿಯಿಲ್ಲ. ಹೀಗಾಗಿ ತನ್ನ ಪಾಲಿನ ನೀರನ್ನು ತೆಲಂಗಾಣ ರಾಜ್ಯ ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ ತನ್ನ ಪಾಲಿನ ನೀರನ್ನು ಕರ್ನಾಟಕ ರಾಜ್ಯಕ್ಕೆ ನೀಡುವಂತೆ ತೆಲಂಗಾಣ ರಾಜ್ಯದ ಬಳಿ ಮನವಿ ಮಾಡಿಕೊಂಡಿದ್ದೇವೆಂದು ಹೇಳಿದ್ದಾರೆ. 
ತುಂಗಭದ್ರಾ ನದಿಯ ಹರಿವು ಒಟ್ಟು 123 ಟಿಎಂಸಿಯಷ್ಟಿದ್ದು, ಇದರಲ್ಲಿ 9 ಟಿಎಂಸಿಯಷ್ಟು ನೀರು ಆವಿಯಾಗುತ್ತದೆ. ಬಳಿಕ 114 ಟಿಎಂಸಿಯಷ್ಟು ನೀರು ಮಾತ್ರ ಉಳಿದುಕೊಳ್ಳುತ್ತದೆ. ಈ ನೀರನ್ನು 2017-18 ಸಾಲಿನಲ್ಲಿ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. 2016-17ನೇ ಸಾಲಿನಲ್ಲಿ ಮಾನವೀಯತೆಯ ಆಧಾರದ ಮೇಲೆ ಕರ್ನಾಟಕ 1 ಟಿಎಂಸಿಯಷ್ಟು ನೀರನ್ನು ನಾರಾಯಣಪುರ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ಹರಿಸಿತ್ತು. ಅಗತ್ಯಬಿದ್ದರೆ, ತೆಲಂಗಾಣ ರಾಜ್ಯಕ್ಕೆ ಈ ವರ್ಷ ಕೂಡ 1 ಅಥವಾ 2 ಟಿಎಂಸಿ ನೀರನ್ನು ಬಿಡುತ್ತೇವೆ. ಇದು ಕುಡಿಯುವ ನೀರಿನ ಪರಸ್ಪರ ಒಪ್ಪಂದವಾಗಿರುತ್ತದೆ ಎಂದಿದ್ದಾರೆ. 
SCROLL FOR NEXT