ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಒಂದೇ ದಿನದಲ್ಲಿ 111 ಜಾಮೀನು ಅರ್ಜಿಗಳ ಇತ್ಯರ್ಥಗೊಳಿಸಿದ ನ್ಯಾಯಾಧೀಶ

ನಗರದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ವ್ಯವಹರಿಸುತ್ತಿದ್ದ ಓರ್ವ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಒಂದೇ ದಿನದಲ್ಲಿ 111 ಜಾಮೀನು ಅರ್ಜಿಗಳನ್ನು....

ಬೆಂಗಳೂರು: ನಗರದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ವ್ಯವಹರಿಸುತ್ತಿದ್ದ ಓರ್ವ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಒಂದೇ ದಿನದಲ್ಲಿ 111 ಜಾಮೀನು ಅರ್ಜಿಗಳನ್ನು ಇತ್ಯರ್ಥಗೊಳಿಸುವ  ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ನ್ಯಾಯಾಧೀಶರು ವಿಚಾರಣೆಗೆ ತೆಗೆದುಕೊಂಡಿದ್ದ ಒಟ್ಟು 111 ಅರ್ಜಿಗಲಲ್ಲಿ 47 ಜಾಮೀನು ಅರ್ಜಿಗಳನ್ನು ನಿರಾಕರಿಸಲಾಗಿದೆ. ಇವುಗಳಲ್ಲಿ ನಿಯಮಿತ ಮತ್ತು ನಿರೀಕ್ಷಿತ ಜಾಮೀನು ಮನವಿಗಳು ಸೇರಿದ್ದವು.
72 ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗೋಪಾಲ್ 10 ದಿನಗಳವರೆಗೆ ನಡೆದ ವಿಚಾರಣೆ, ವಾದ-ವಿವಾದಗಲ ನಂತರ ಜನವರಿ 1ರಂದು ಈ  ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಗೋಪಾಲ್ ನ.22ರಂದು ನ್ಯಾಯಾಲಯದ ಉಸ್ತುವಾರಿ ವಹಿಸಿಕೊಂಡಾಗ, 2015ರ ಅಂತ್ಯದಿಂದ ಇಲ್ಲಿಯವರೆಗೆ ಸುಮಾರು 375 ಜಾಮೀನು ಅರ್ಜಿಗಳು ಬಾಕಿ ಉಳಿದಿದ್ದವು.
ಗೋಪಾಲ್ ತಮ್ಮ ವೃತ್ತಿಜೀವನದಲ್ಲಿ ಮೊದಲಿನಿಂದಲೂ ಪ್ರಕರಣಗಳ ತುರ್ತು ವಿಲೇವಾರಿಗೆ ಹೆಸರಾಗಿದ್ದಾರೆ. ಉದಾಹರಣೆಗೆ, ಅವರು ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ, ಪ್ರತಿ ತಿಂಗಳು 140-180 ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದರು. ಅವುಗಳಲ್ಲಿ ವಿಚ್ಛೇದನದ, ಸಂಬಂಧಗಳ ನಿರ್ವಹಣೆ, ಜೀವನಾಂಶ, ಇತ್ಯಾದಿ ಪ್ರಕರಣ ಸೇರಿದ್ದವು.  ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದಾಗ ಕೂಡ, ನ್ಯಾಯಾಧೀಶರು 18 ತಿಂಗಳ ಅಧಿಕಾರಾವಧಿಯಲ್ಲಿ ಶೇ.70 ಪ್ರಕರಣಗಳಲ್ಲಿ ಆರೋಪಿಗಳನ್ನು ಶಿಕ್ಷಿಸುವ ಮೂಲಕ ಬಲವಾದ ಸಂದೇಶವನ್ನು ನೀಡಿದ್ದರು.
ಮಹಿಳೆಯರ ವಿರುದ್ಧದ ಅಪರಾಧಗಳ ಬಾಕಿ ಪ್ರಕರಣಗಳನ್ನು ಪ್ರಯತ್ನಿಸಲು ಗೋಪಾಲ್ ಅವರನ್ನು ಹೊಸದಾಗಿ ಗೊತ್ತುಪಡಿಸಿದ ನ್ಯಾಯಾಲಯಕ್ಕೆ ಒಂದು ತಿಂಗಳ ಹಿಂದೆ ಹೈಕೋರ್ಟ್ ನಿಂದ ನೇಮಕ ಮಾಡಲಾಗಿತ್ತು. ಈ ಹಿಂದೆ ವರದಕ್ಷಿಣೆ ಸಾವುಗಳು, ಆತ್ಮಹತ್ಯೆ, ಮನೆಯಲ್ಲಿನ ಹಿಂಸೆ, ಮುಂತಾದವುಗಳ ಇತ್ಯರ್ಥಕ್ಕೆ ಕೇವಲ ಒಂದು ನ್ಯಾಯಾಲಯವಿತ್ತು. ಇದರಿಂದ ಈ ರೀತಿಯ ಪ್ರಕರಣ ವಿಲೇವಾರಿ ವಿಳಂಬವಾಗುತ್ತಿತ್ತು ಎಂದು ಸಿವಿಲ್ ನ್ಯಾಯಾಲಯದ ಮೂಲಗಳು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT