ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಗಂಡು ಮಗುವಿಗಾಗಿ ತಾಯಂದಿರ ಪಟ್ಟು ಪ್ರಕರಣ: ಡಿಎನ್ಎ ಪರೀಕ್ಷೆ ಬಳಿಕ ಸಮಸ್ಯೆ ಇತ್ಯರ್ಥ

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಅದಲಿ ಬದಲಿ ಪ್ರಕರಣ ಡಿಎನ್ಎ ಪರೀಕ್ಷೆ ಬಳಿಕ ಇದೀಗ ಇತ್ಯರ್ಥಗೊಂಡಿದೆ...

ನಂದಮ್ಮ ಹಾಗೂ ನಜ್ಮಾ ಬೇಗಂ
Manjula VN
Updated On : 6 Jan 2018, 11:57 am
ಕಲಬುರಗಿ: ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಅದಲಿ ಬದಲಿ ಪ್ರಕರಣ ಡಿಎನ್ಎ ಪರೀಕ್ಷೆ ಬಳಿಕ ಇದೀಗ ಇತ್ಯರ್ಥಗೊಂಡಿದೆ. 
ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಡಿಸೆಂಬರ್ 14 ರಂದು ವೈದ್ಯರು ಮಾಡಿದ್ದ ಎಡವಟ್ಟಿನಿಂದಾಗಿ ನವಜಾತ ಶಿಶುಗಳು ಅದಲು ಬದಲಾಗಿದ್ದವು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಂದಮ್ಮ ಎಂಬುವವರಿಗೆ ಗಂಡು ಮಗು ಕೊಟ್ಟು, ಗಂಡುವಿಗೆ ಜನ್ಮ ನೀಡಿದ್ದ ನಜ್ಮಾ ಬೇಗಂ
ಎಂಬುವವರಿಗೆ ಹೆಣ್ಣು ಮಗುವನ್ನು ಕೊಟ್ಟಿದ್ದರು. ಬಳಿಕ ತಪ್ಪಿನ ಅರಿವಾದ ಸಿಬ್ಬಂದಿ ಮಕ್ಕಳನ್ನು ಅವರ ತಾಯಂದಿರಿಗೆ ನೀಡಲು ಪ್ರಯತ್ನಿಸಿದ್ದರು. 

Advertisement

Advertisement

ಆದರೆ, ನಂದಮ್ಮ ಅವರ ಕುಟುಂಬ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ನಂದಮ್ಮ ಗಂಡುವಿಗೆ ಜನ್ಮವನ್ನು ನೀಡಿದ್ದು, ಬೇರೆಯವರು ಹೆತ್ತ ಹೆಣ್ಣು ಮಗುವನ್ನು ಇದೀಗ ನಮಗೆ ನೀಡುತ್ತಿದ್ದಾರೆಂದು ಹೇಳಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. 
ಇದರಂತೆ ನಜ್ಮಾ ಬೇಗಂ ಕೂಡ ನಾನು ಗಂಡುವಿಗೆ ಜನ್ಮವನ್ನು ನೀಡಿದ್ದು ನಾನು ಹೆತ್ತ ಮಗುವನ್ನು ಬೇರೆಯವರಿಗೆ ಕೊಡುವುದಿಲ್ಲ ಎಂದು ಹೇಳಿದ್ದರು. 
ವೈದ್ಯರು ಎಷ್ಟೇ ಹೇಳಿದರೂ ಕೇಳದ ನಂದಮ್ಮ ಅವರ ಕುಟುಂಬಸ್ಥರು ನಮಗೆ ಗಂಡು ಮಗುವೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದರು. ಇಬ್ಬರೂ ತಾಯಂದಿರು ಮಕ್ಕಳಿಗೆ ಹಾಲುಣಿಸಲು ನಿರಾಕರಿಸಿದ್ದರು. ಸಮಸ್ಯೆ ದೊಡ್ಡದಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಕ್ತ ಪರೀಕ್ಷೆಯ ವರದಿಯಂತೆ ತಾಯಂದಿರಿಗೆ ನೀಡಲಾಗಿರುವ ಮಕ್ಕಳಿಗೆ ಹಾಲುಣಿಸುವಂತೆ ಸೂಚನೆ ನೀಡಿದ್ದರು. 
ಬಳಿಕ ಮಕ್ಕಳ ಹಾಗೂ ಪೋಷಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಇದರ ವರದಿ ಬಂದಿದ್ದು ನಂದಮ್ಮ ಅವರು ಹೆಣ್ಣುವಿಗೆ ಜನ್ಮ ನೀಡಿದ್ದಾರೆಂದು ತಿಳಿದುಬಂದಿದೆ. ಡಿಎನ್ಎ ಪರೀಕ್ಷೆ ಬಳಿಕವೂ ನಂದಮ್ಮ ಅವರ ಕುಟುಂಬಸ್ಥರು ಮಗುವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೆ ಮಗುವನ್ನು ಆಸ್ಪತ್ರೆಯಲ್ಲಿಯೇ ಇರಿಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments