ಸಂಗ್ರಹ ಚಿತ್ರ 
ರಾಜ್ಯ

ನೈತಿಕ ಪೊಲೀಸ್ ಗಿರಿ ಪೋಸ್ಟ್: ವಾಟ್ಸಪ್ ಮೇಲೆ ಪೊಲೀಸರಿಂದ ನಿಗಾ

ಧನ್ಯಶ್ರೀ ಆತ್ಮಹತ್ಯೆ ಬಳಿಕ ಕರಾವಳಿಯಲ್ಲಿ ವೈರಲ್ ಆಗಿದ್ದ ಹಿಂದೂಪರ ಸಂಘಟನೆಗಳ ವಾಟ್ಸಪ್ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಮುಂದಾಗಿರುವ ದಕ್ಷಿಣ ಕನ್ನಡ ಪೊಲೀಸರು ಇನ್ನು ಮುಂದೆ ವಾಟ್ಸಪ್ ಗ್ರೂಪ್ ಗಳ ಮೇಲೆ ನಿಗಾ ವಹಿಸಲು ನಿರ್ಧರಿಸಿದ್ದಾರೆ.

ಮಂಗಳೂರು: ಧನ್ಯಶ್ರೀ ಆತ್ಮಹತ್ಯೆ ಬಳಿಕ ಕರಾವಳಿಯಲ್ಲಿ ವೈರಲ್ ಆಗಿದ್ದ ಹಿಂದೂಪರ ಸಂಘಟನೆಗಳ ವಾಟ್ಸಪ್ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಮುಂದಾಗಿರುವ ದಕ್ಷಿಣ ಕನ್ನಡ ಪೊಲೀಸರು ಇನ್ನು ಮುಂದೆ ವಾಟ್ಸಪ್  ಗ್ರೂಪ್ ಗಳ ಮೇಲೆ ನಿಗಾ ವಹಿಸಲು ನಿರ್ಧರಿಸಿದ್ದಾರೆ.
ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಮತ್ತು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಿಂದೂಪರ ಸಂಘಟನೆಯ ವಾಟ್ಸಪ್ ಗ್ರೂಪ್ ನಲ್ಲಿ ಹಿಂದೂ ಯುವತಿರರಿಗೆ ಬೆದರಿಕೆ ಹಾಕಲಾಗಿತ್ತು. ಅನ್ಯಕೋಮಿನ  ಯುವಕರೊಂದಿಗೆ ಕಾಣಿಸಿಕೊಂಡರೆ ಸ್ಥಳದಲ್ಲೇ ಧರ್ಮದೇಟು ಎಂದು ಬೆದರಿಕೆ ಹಾಕಲಾಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಕ್ರಮಕ್ಕೆ ಮುಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಪ್ರಚೋದನಕಾರಿ ಮಾಹಿತಿ  ಹಂಚುವ ಮತ್ತು ಬೆದರಿಕೆ ಹಾಕುವ ಪೋಸ್ಟ್ ಗಳ ನಿಗಾ ಇಡಲು ನಿರ್ಧರಿಸಿದ್ದಾರೆ.
ಅದರಂತೆ ಸತತವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಅದರಲ್ಲೂ ವಾಟ್ಸಪ್ ಮೇಲೆ ಕಣ್ಣಿಡಲು ಪೊಲೀಸರು ನಿರ್ಧರಿಸಿದ್ದು, ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ  ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿ ಅವರು, ಪ್ರಚೋದನಕಾರಿ ಮತ್ತು ಬೆದರಿಕೆ ಹಾಕುವಂತಹ ಪೋಸ್ಟ್ ಗಳ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪೋಸ್ಟ್ ಗಳು ಕಂಡ ಕೂಡಲೇ ಆ  ಪೋಸ್ಟ್ ನ ಸ್ಕ್ರೀನ್ ಶಾಟ್ ತೆಗೆದುಕೊಂಡು ಪೊಲೀಸ್ ಕಂಟ್ರೋಲ್ ರೂಂ ನ ವಾಟ್ಸಪ್ ಸಂಖ್ಯೆ (9480805500) ವಾಟ್ಸಪ್ ಮಾಡುವಂತೆ ಮನವಿ ಮಾಡಿದ್ದಾರೆ. ದೂರು ಬರುವ ವಾಟ್ಸಪ್ ಗ್ರೂಪ್ ಗಳ ಮೇಲೆ ನಿಗಾ ಇಟ್ಟು ಬಳಿಕ  ಅಂತಹ ಗ್ರೂಪ್ ಗಳ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಾಲಕೃಷ್ಣ ಪೂಜಾರಿ ಮತ್ತು ಸತೀಶ್ ಎಂಬುವವರನ್ನು ಬಂಧಿಸಿರುವ  ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಶುಕ್ರವಾರ ಬಂಟ್ವಾಳ ತಾಲೂಕಿನಲ್ಲಿ ಬಂಧಿಸಲಾಗಿತ್ತು, ಇಬ್ಬರ ವಿರುದ್ಧವೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153 ಎ, 354, 504ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!