ರಾಜ್ಯ

ಬೆಂಗಳೂರು: ತಲೆ ಮೇಲೆ ಪಟಾಕಿ ಸಿಡಿದು ಬಾಲಕ ಸಾವು

Raghavendra Adiga
ಬೆಂಗಳೂರು: ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದ ಪಟಾಕಿ ಸ್ಪೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‍ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಧನುಷ್ (12) ಎಂದು ಗುರುತಿಸಲಾಗಿದ್ದು ಭಾನುವಾರ ಅರಾತ್ರಿ 9 ಗಂಟೆಗೆ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಲೂರ್ದ್ ಚರ್ಚ್ ನಲ್ಲಿ ಆಯೋಜಿಸಿದ್ದ ಪಟಾಕಿ ಸಿಡಿಸುವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.
ಪ್ರತಿ ವರ್ಷವೂ ಹೊಸ ವರ್ಷದ ಎರಡನೇ ಭಾನುವಾರ ಇಲ್ಲಿ ಪಟಾಕಿ, ಸಿಡಿಮದ್ದು ಪ್ರದರ್ಶನ ಇರಲಿದ್ದು ನಿನ್ನೆ(ಭಾನುವಾರ) ಸಹ ಈ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಾವಿರಾರು ಜನ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಧನುಷ್ ಸಹ ಬಾಗವಹಿಸಿದ್ದ. ಕಾರ್ಯಕ್ರಮ ನಡೆಯುತ್ತಿರುವ ವೇಳೆ ಬಾಲಕನ ತಲೆ ಮೇಲೆ ಪಟಾಕಿ ಬಿದ್ದು ಅಲ್ಲೇ ಸ್ಪೋಟಗೊಂಡಿದೆ. ಸ್ಫೋಟದ ರಭಸಕ್ಕೆ ತಲೆ ಬುರುಡೆ  ಎರಡು ಹೋಳಾಗಿ ಮೆದುಳು ಹೊರಬಂದಿತ್ತು.
ಮೃತ ಬಾಲಕ ಧನುಷ್ ಬೆಂಗಳೂರು ತ್ಯಾಗರಾಜನಗರ ನಿವಾಸಿಯಾಗಿದ್ದು ಈ ಕುರಿತು ಹಲಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
SCROLL FOR NEXT