ಯದುವೀರ್-ತ್ರಿಷಿಕಾ ದಂಪತಿ ಹಾಗೂ ಯುವರಾಜನೊಂದಿಗೆ ರಾಜಮಾತೆ 
ರಾಜ್ಯ

ಮೈಸೂರು: ಯದುವಂಶದ ಯುವರಾಜನ ನಾಮಕರಣ ಫೆ.19ರಂದು

ಯದುವಂಶದ ಯುವರಾಜನ ನಾಮಕರಣದ ದಿನಾಂಕ ನಿಗದಿಯಾಗಿದ್ದು, ಫೆ.19ರಂದು ಯುವರಾಜನ ನಾಮಕರಣ ನಡೆಯಲಿದೆ...

ಮೈಸೂರು: ಯದುವಂಶದ ಯುವರಾಜನ ನಾಮಕರಣದ ದಿನಾಂಕ ನಿಗದಿಯಾಗಿದ್ದು, ಫೆ.19ರಂದು ಯುವರಾಜನ ನಾಮಕರಣ ನಡೆಯಲಿದೆ. 
ಮೈಸೂರು ಅರಸು ಮನೆತನದ ಯದುವೀರ್-ತ್ರಿಷಿಕಾ ದಂಪತಿಗೆ ಜನಿಸಿರುವ ಗಂಡು ಮಗುವಿಗೆ ನಾಮಕರಣ ಮಾಡಲು ಮುಂದಿನ ತಿಂಗಳು ಫೆಬ್ರವರಿ 19 ಮತ್ತು 20ರಂದು ದಿನಾಂಕ ನಿಗದಿ ಮಾಡಲಾಗಿದ್ದು, ನಾಮಕರಣ ಹಿನ್ನಲೆ ಅರಮನೆ ಶೃಂಗಾರಗೊಳ್ಳುತ್ತಿದೆ. 
19ರಂದು ಧಾರ್ಮಿಕ ಪೂಜಾ ವಿಧಾನಗಳು ನಡೆಯಲಿದ್ದು, 20 ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ನಾಮಕರಣ ಶಾಸ್ತ್ರ ಮಾಡಲು ರಾಜಮಾತೆ ಪ್ರಮೋದಾದೇವಿಯವರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 
1953ರ ಫೆಬ್ರವರಿ 20ರಂದು ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ ಜನ್ಮದಿನವಾಗಿದ್ದು, ಅಂದೇ ತಮ್ಮ ಮೊಮ್ಮಗನಿಗೆ ಉತ್ತರ ಬಾದ್ರ ನಕ್ಷತ್ರದಲ್ಲಿ ನಾಮಕರಣ ಮಾಡಲು ರಾಜಮಾತೆ ನಿರ್ಧರಿಸಿದ್ದಾರೆಂದು ಅರಮನೆಯ ಮೂಲಗಳು ಮಾಹಿತಿ ನೀಡಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!