ರಾಜ್ಯ

ಕಳಸಾ ಬಂಡೂರಿ ಸ್ಥಳದಲ್ಲಿ ಕಾಮಗಾರಿ ಮೇಲೆ ಹದ್ದಿನ ಕಣ್ಣಿಟ್ಟಿರುವ ಗೋವಾ ತಂಡ

Sumana Upadhyaya
ಬೆಳಗಾವಿ: ಆಕ್ರಮಣಕಾರಿ ನಡೆಯೊಂದರಲ್ಲಿ ಗೋವಾ ಸರ್ಕಾರ ಬೆಳಗಾವಿ ಜಿಲ್ಲೆಯ ಕಳಸಾ-ಬಂಡೂರಿ ಯೋಜನೆಯ ಸ್ಥಳದಲ್ಲಿ ನಿರ್ಮಾಣವೊಂದ ತಪಾಸಣೆ ಮಾಡಲು ನಾಲ್ವರು ಎಂಜಿನಿಯರ್ ಗಳ ತಂಡವನ್ನು ರಚಿಸಿದೆ. ಕರ್ನಾಟಕ ಸರ್ಕಾರ ನೀರು ಹಂಚಿಕೆ ಸಾಧ್ಯತೆಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಮಹಾದಾಯಿ ನೀರು ನ್ಯಾಯಮಂಡಳಿಗೆ ವಿವಾದದ ಸಂಕ್ಷಿಪ್ತ ವಿವರಣೆಯನ್ನು ಕೂಡ ಗೋವಾ ಸರ್ಕಾರ ಸಲ್ಲಿಸಿದೆ.
ಕಳೆದ ವಾರದಿಂದ ಕಳಸಾ ಬಂಡೂರಿ ಯೋಜನೆಯ ಕನಕುಂಬಿ ಗ್ರಾಮದ ಯೋಜನೆಯ ಸ್ಥಳ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಸಚಿವರುಗಳು, ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಕುತೂಹಲದ ತಾಣವಾಗಿದೆ. ಇಲ್ಲಿ ಯಾವುದೇ ನಿರ್ಮಾಣ ನಡೆಯುತ್ತಿಲ್ಲ ಎಂದು ಕಳೆದ ವಾರ ಅಲ್ಲಿಗೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರೂ ಕೂಡ ಗೋವಾ ಸರ್ಕಾರದಿಂದ ನಾಲ್ವರು ಎಂಜಿನಿಯರ್ ಗಳ ತಂಡದ ರಚನೆ ಇಲ್ಲಿನ ಕನ್ನಡ ಕಾರ್ಯಕರ್ತರನ್ನು ಸಿಟ್ಟು ತರಿಸಿದೆ.
ಗೋವಾ ತಂಡ ಪ್ರತಿವಾರ ಕನಕುಂಬಿಯನ್ನು ಭೇಟಿ ಮಾಡುತ್ತಿದ್ದು ಗೋವಾ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ. ಎಂಜಿನಿಯರ್ ಗಳ ತಂಡದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್, ಕಾರ್ಯಕಾರಿ ಎಂಜಿನಿಯರ್ ಮತ್ತು ಇಬ್ಬರು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಗಳು ಇದ್ದಾರೆ.
ಮಹಾದಾಯಿ ನದಿಯಲ್ಲಿ ಪಶ್ಚಿಮ ಘಟ್ಟದ ಕರ್ನಾಟಕದ 12 ಯೋಜನೆಗಳನ್ನು ಗೋವಾ ಸರ್ಕಾರ ವಿರೋಧಿಸುತ್ತಿದೆ. ಇದೇ ವೇಳೆ ಗೋವಾ ಸರ್ಕಾರ ಯೋಜನಾ ಸ್ಥಳದಲ್ಲಿ ಕರ್ನಾಟಕ ಯಾವುದಾದರೂ ಕೋರ್ಟ್ ಆದೇಶಗಳ ವಿರುದ್ಧ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತದೆಯೇ ಎಂದು ಪರೀಕ್ಷಿಸುತ್ತಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಗೋವಾ ಸರ್ಕಾರದ ಈ ನಡೆ ಬೆಳಗಾವಿಯ ಕನ್ನಡಪರ ಕಾರ್ಯಕರ್ತರಿಗೆ ಕಿರಿಕಿರಿಯನ್ನುಂಟುಮಾಡಿದ್ದಾರೆ. ಇದಕ್ಕೆ ಕರ್ನಾಟಕ ಸರ್ಕಾರ ಸರಿಯಾದ ಉತ್ತರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ವಿವಾದಿತ ಸ್ಥಳಕ್ಕೆ ನ್ಯಾಯಾಂಗದ ಆಯೋಗ ಭೇಟಿ ನೀಡಬೇಕೆಂದು ಕನ್ನಡ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.  
SCROLL FOR NEXT