ಮಡಿಕೇರಿ; ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಾಗರಹೊಳೆಯಿಂದ ಸುಂಕದಕಟ್ಟೆಗೆ ತೆರಳುವ ಹಾದಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಘಟನೆ ಸೇರಿದಂತೆ ಜನವರಿ ತಿಂಗಳೊಂದರಲ್ಲಿ ಒಟ್ಟು ಮೂರು ಹುಲಿಗಳು ಸಾವನ್ನಪ್ಪಿದೆ. ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಈ ಹಿಂದೆ ಎರಡು ಹುಲಿಗಳು ಸಾವನ್ನಪ್ಪಿದ್ದವು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅರಣ್ಯಾಧಿಕಾರಿಗಳು ಹಾಗೂ ತಜ್ಞರು ಪರಿಶೀನೆ ನಡೆಸುತ್ತಿದ್ದಾರೆ. ತಲೆ ಹಾಗೂ ಮುಂದಿನ ಕಾಲಿನ ಭಾಗ ಹೊರತುಪಡಿಸಿ ದೇಹದ ಇತರ ಭಾಗ ಸಂಪೂರ್ಣವಾಗಿ ಕೊಳೆತು ಹೋಗಿದೆ. ಹುಲಿಯ ಕತ್ತು, ಮುಖ ಹಾಗೂ ದೇಹದ ಹಲವು ಭಾಗದಲ್ಲಿ ಮತ್ತೊಂದು ಹುಲಿ ದಾಳಿ ನಡೆಸಿ ಆಳವಾದ ಗಾಯ ಮಾಡಿದ್ದು, ಹುಲಿಯ ದೇಹ ಅರ್ಧಭಾಗ ಕೊಳೆತಿರುವುದರಿಂದ ಗಂಡು ಅಥವಾ ಹೆಣ್ಣು ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಹುಲಿ ಸಾವನ್ನಪ್ಪಿದೆ. ಹುಲಿಯ ತಲೆ ಭಾಗದಲ್ಲಿ ನಾಲ್ಕು ಜಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ಹುಲಿಯ ದೇಹ ಅರ್ಧಭಾಗ ಕೊಳೆತುಹೋಗಿರುವುದರಿಂದ ಲಿಂಗ ಯಾವುದು ಎಂದು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹುಲಿ ಯೋಜನಾ ನಿರ್ದೇಶಕ ಮಣಿಕಾಂತ್ ಅವರು ಹೇಳಿದ್ದಾರೆ.