ರಾಜ್ಯ

ಬೆಂಗಳೂರು ಉಪನಗರ ರೈಲು ಯೋಜನೆಗೆ 340 ಕೋಟಿ ರೂ. ಅನುಮೋದನೆ

Nagaraja AB

ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಿತ ವಿಶೇಷ ಘಟಕ ಸ್ಥಾಪಿಸಲು 349 ಕೋಟಿ ರೂ. ನೀಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

 ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯಸರ್ಕಾರದಿಂದ 349 ಕೋಟಿ ರೂಪಾಯಿ ನೀಡಲಾಗುತ್ತಿದೆ. ಉಳಿದ ಹಣವನ್ನು ರೈಲ್ವೆ ಸಚಿವಾಲಯ ನೀಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ತಿಳಿಸಿದ್ದಾರೆ.

ತುಮಕೂರು, ಚಿಕ್ಕಬಳ್ಳಾಪುರ, ಹೊಸೂರು,ಕುಣಿಗಲ್   ನಂತಹ ಉಪನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ತ್ವರಿತವಾಗಿ ರೈಲ್ವೆ ಸೇವೆ ಕಲ್ಪಿಸಲಾಗುವುದು, 58 ಹೊಸ ರೈಲ್ವೆಗಳನ್ನು ಬಿಡಲಾಗುವುದು, ಪ್ರತಿಯೊಂದು ರೈಲಿನಲ್ಲಿ 1,800 ರಿಂದ 2000 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದು ಹೇಳಿದರು.

ಈ ಯೋಜನೆ ಅನುಷ್ಠಾನಗೊಂಡರೆ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬೇಗ ತೆರಳಲು ಅನುಕೂಲವಾಗಲಿದೆ.  ಬೈಯಪ್ಪನಹಳ್ಳಿ,  ವೈಟ್ ಫೀಲ್ಡ್,  ಕಂಟೋನ್ಮೆಂಟ್  ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗಲಿದೆ. ಹೊಸೂರು,. ಕುಣಿಗಲ್, ಬಂಗಾರಪೇಟೆ ಮತ್ತು ತುಮಕೂರಿನ ಪ್ರಯಾಣಿಕರಿಗೆ ತುಂಬಾ  ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

SCROLL FOR NEXT