ಕಲಬುರಗಿ: ಮಳೆಗಾಲ ಬಂತೆಂದರೆ ಕಲಬುರಗಿಯ ನಿಂಬರ್ಗ ಸರ್ಕಾರಿ ಶಾಲೆಯ ಮಕ್ಕಳಿಗೆ ನರಕಯಾತನೆ. ಕಟ್ಟಡದ ಛಾವಣಿ ದುರಾವಸ್ಥೆಗೊಂಡು ನೀರು ತರಗತಿಯೊಳಗೆ ಸೋರುತ್ತಿರುತ್ತದೆ. ಅದೇ ನೀರು ಹರಿಯುವ ತರಗತಿಯಲ್ಲಿ ಕುಳಿತುಕೊಂಡು ಮಕ್ಕಳು ಪಾಠ ಕಲಿಯಬೇಕಾದ ಪರಿಸ್ಥಿತಿಯಿದೆ. ಆದರೆ ಇಲ್ಲಿ ಮಕ್ಕಳು ಮಾತ್ರ ಶಾಲೆಗೆ ಹಾಜರಾತಿ ತಪ್ಪಿಸುವುದಿಲ್ಲ.
''ಮಳೆ ಬಂದಾಗ ನೀರು ತರಗತಿಯೊಳಗೆ ಸೋರುತ್ತದೆ. ಆದರೆ ನಮಗೆ ಓದು, ಕಲಿಕೆ ಮುಖ್ಯ, ಹಾಗಾಗಿ ನಾವು ಪ್ರತಿನಿತ್ಯ ತರಗತಿಗಳಿಗೆ ಬರುತ್ತೇವೆ. ಇಲ್ಲಿಗಿಂತ ಬೇರೆ ಕಡೆ ನಮಗೆ ಪಾಠ ಉತ್ತಮವಾಗಿ ಸಿಗುತ್ತದೆ ಎಂದು ಅನಿಸುವುದಿಲ್ಲ'ಎನ್ನುತ್ತಾನೆ ವಿದ್ಯಾರ್ಥಿಯೋರ್ವ.
ಮಳೆ ಬಂದಾಗ ನೀರು ಛಾವಣಿಯೊಳಗೆ ಜಿನುಗುತ್ತಿರುವುದರಿಂದ ಮಕ್ಕಳು ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿನ ಮಕ್ಕಳು ಮಾತ್ರ ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಅವರು ಆಸಕ್ತಿ ತೋರಿಸಿ ಕಲಿಯುತ್ತಾರೆ, ಬುದ್ಧಿವಂತರಾಗಿದ್ದಾರೆ ಎನ್ನುತ್ತಾರೆ ಶಾಲೆಯ ಅಧ್ಯಾಪಕಿ ಉಷಾ ಪವಾರ್.