Organ donation: Mysuru-Bengaluru green corridor saves five lives
ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ 22 ವರ್ಷದ ಯುವತಿಯ ಅಂಗಾಂಗಗಳನ್ನು ಮೈಸೂರಿನಿಂದ ಬೆಂಗಳೂರಿಗೆ ಗ್ರೀನ್ ಕಾರಿಡಾರ್ ನಿರ್ಮಿಸಿ ಒಂದೂವರೆಗೆ ಘಟನೆಗಳಲ್ಲಿ ರವಾನಿಸಲಾಗಿದ್ದು, ಯುವತಿಯ ಅಂಗಾಂಗ ದಾನದಿಂದ ಐವರು ಜೀವ ಉಳಿದಿದೆ.
ಹಾಸನ ಜಿಲ್ಲೆ ಸಕಲೇಶಪುರ ನಿವಾಸಿ ನಮನಾ (22) ಗುರುವಾರ ಅಪಘಾತಕ್ಕೆ ತುತ್ತಾಗಿದ್ದರು. ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಯುವತಿಯ ಕುಟುಂಬದವರು ಅಂಗಾಂಗ ದಾನ ಮಾಡಲು ತೀರ್ಮಾನಿಸ್ದದರು. ಇದರಿಂದ ಯುವತಿಯ ಶ್ವಾಸಕೋಶ, ಮೂತ್ರಪಿಂಡ, ಹೃದಯ ಕವಾಟು ದಾನ ಮಾಡಲಾಗಿತ್ತು.
ಯುವತಿಯ ಅಂಗಾಂಗಗಳನ್ನು ಹೊತ್ತ ಆ್ಯಂಬುಲೆನ್ಸ್'ಗೆ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು.
ಮಧ್ಯಾಹ್ನ 12ಕ್ಕೆ ಹೊರಟ ಆ್ಯಂಬುಲೆನ್ಸ್ ಒಂದೂವರೆ ಗಂಟೆ ಅವಧಿಯೊಳಗೆ ಬೆಂಗಳೂರು ತಲುಪಿತು. ಶ್ವಾಸಕೋಶಗಳನ್ನು ಬಿಜಿಎಸ್ ಗ್ಲೋಬರ್ ಆಸ್ಪತ್ರೆ, ಹೃದಯದ ಕವಾಟುಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯ. ಒಂದು ಮೂತ್ರ ಪಿಂಡವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮತ್ತೊಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಹಲವು ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ನವೀನ್'ಗೆ ತಂಗಿ ನಮನಾಳೇ ಪ್ರಪಂಚವಾಗಿದ್ದಳು. ಇದೀಗ ತಂಗಿಯನ್ನು ಕಳೆದುಕೊಂಡ ನವೀನ್ ಅವರ ದುಃಖ ಮುಗಿಲು ಮುಟ್ಟಿದೆ.
ತಂಗಿ ನಮನಾ ಬದುಕಿಸಲು ಸಾಧ್ಯವಿಲ್ಲ ಆದರೆ, ಅವರ ಅಂಗಾಂಗಗಳು ಐವರ ಜೀವ ಉಳಿಸಬಹುದು ಎಂದು ಹೇಳಿದರು. ತಂದೆ, ತಾಯಿಯನ್ನು ಕಳೆದುಕೊಂಡು ಜೀವದ ಬೆಲೆಯನ್ನು ಅರಿತಿದ್ದ ನವೀನ್ ಅವರಿಗೆ ವೈದ್ಯರು ಪ್ರೋತ್ಸಾಹ ನೀಡಿದ್ದಾರೆ. ಇದರಂತೆ ಅಂಗಾಂಗ ದಾನಕ್ಕೆ ನವೀನ್ ಅವರು ಒಪ್ಪಿಗೆ ನೀಡಿದ್ದಾರೆ. ಬಳಿಕ ಗ್ರೀನ್ ಕಾರಿಡಾರ್ ಮೂಲಕ ಅಂಗಾಂಗಗಳನ್ನು ಬೆಂಗಳೂರಿಗೆ ರವಾನಿಸಿ ಐವರಿಗೆ ಜೀವದಾನ ಮಾಡಿದ್ದಾರೆ.
ಹಾಸನದ ಜಿಲ್ಲೆ ಸಕಲೇಶಪುರ ನಿವಾಸಿ ನಮನಾ (22) ಮತ್ತು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಸಂಗವಾಡಿ ಗ್ರಾಮದ ಅವರಿಂದ ರಾವ್ (21) ಇಬ್ಬರೂ ಸ್ನೇಹಿತರಾಗಿದ್ದು, ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರೂ ಬೈಕ್ ನಲ್ಲಿ ಚಾಮುಂಡಿಬೆಟ್ಟಕ್ಕೆ ಗುರುವಾರ ಸಂಜೆ ಬೈಕ್ ನಲ್ಲಿ ಹೋಗಿದ್ದರು. ವಾಪಸ್ ಬರುವ ವೇಳೆ ಅಪಘಾತಕ್ಕೆ ತುತ್ತಾಗಿದ್ದರು.