ಬೆಂಗಳೂರು: ರೈಫಲ್ಸ್ ಕಳ್ಳತನ, ನಾಲ್ವರು ಪೋಲೀಸ್ ಪೇದೆಗಳ ಅಮಾನತು 
ರಾಜ್ಯ

ಬೆಂಗಳೂರು: ರೈಫಲ್ಸ್ ಕಳ್ಳತನ, ನಾಲ್ವರು ಪೋಲೀಸ್ ಪೇದೆಗಳ ಅಮಾನತು

ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೋಲೀಸ್ ಪೇದೆಗಳನ್ನು ಸೇವೆಯಿಂದ ಅಮಾನತು ಮಾಡಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.

ಬೆಂಗಳೂರು: ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೋಲೀಸ್ ಪೇದೆಗಳನ್ನು ಸೇವೆಯಿಂದ ಅಮಾನತು ಮಾಡಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ಪೋಲೀಸ್ ಠಾಣೆ ಪೇದೆಗಳಾದ  ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್, ಬಸವರಾಜ್ ಬೆಳಗಾವಿ ಅಮಾನತಾದ ಪೇದೆಗೆಳಾಗಿದ್ದಾರೆ.
ಚುನಾವಣೆ ಸಮಯದಲ್ಲಿ ಸಾರ್ವಜನಿಕರು ಶಸ್ತ್ರಾಸ್ತ್ರಗಳನ್ನು ಪೋಲೀಸರ ಸುಪರ್ದಿಗೆ ನೀಡಿದ್ದಾರೆ. ಹಾಗೆ ಠಾಣೆಯ ಸುಪರ್ದಿಗೆ ನೀಡಿದ್ದ ಶಸ್ತ್ರಾಸ್ತ್ರಗಳಲ್ಲಿ ಜೋಡಿ ನಳಿಕೆಯ ಎರಡು ರೈಫಲ್ಸ್ ಗಳನ್ನು ಪೇದೆಗಳು ಕದ್ದಿದ್ದಾರೆ ಎನ್ನಲಾಗಿದೆ.
ಶಸ್ತ್ರಾಸ್ತ್ರಗಳ ನಾಪತ್ತೆ ಸಂಬಂಧ ಪಿಎಸ್ ಐ ಸುಮಾ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.ಈ ಸಂಬಂಧ ವಿಚಾರಣೆ ನಡೆಸಿದಾಗ ಠಾಣೆಯ ಪೇದೆಗಲೇ ಕಳ್ಳತನ ಮಾಡಿದ್ದಾರೆಂದು ಬಹಿರಂಗವಾಗಿದೆ.ಪಿಎಸ್ ಐ ಸುಮಾ ಅವರ ಮೇಲೆ ಆರೋಪ ಬರಲೆನ್ನುವ ಕಾರಣಕ್ಕೆ ತಾವು ಈ ಕೃತ್ಯ ಎಸಗಿದ್ದಾಗಿ ಆರೋಪಿ ಪೇದೆಗಳು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈಫಲ್ಸ್ ಕಳ್ಳತನ ಮಾಡಿರುವ ನಾಲ್ವರನ್ನು ಅಮಾನತುಗೊಳಿಸಿ ನಗರ ಪೋಲೀಸ್ ಕಮಿಷನರ್ ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT