ನಮ್ಮ ಮೆಟ್ರೊ 
ರಾಜ್ಯ

ಸ್ಮಾರ್ಟ್ ಐಡಿಯಾದಿಂದ 'ನಮ್ಮ ಮೆಟ್ರೊ ಸ್ಮಾರ್ಟ್ ಕಾರ್ಡ್'ಗಳ ಮಾರಾಟದಲ್ಲಿ ಹೆಚ್ಚಳ!

'ನಮ್ಮ ಮೆಟ್ರೊ' ನಷ್ಟದಲ್ಲಿಯೇ ಸಂಚರಿಸುತ್ತಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕರು ಅನೇಕ ಬಾರಿ ...

ಬೆಂಗಳೂರು: 'ನಮ್ಮ ಮೆಟ್ರೊ' ನಷ್ಟದಲ್ಲಿಯೇ ಸಂಚರಿಸುತ್ತಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕರು ಅನೇಕ ಬಾರಿ ಹೇಳಿದ್ದುಂಟು. ಇಂತಹ ಸಂದರ್ಭದಲ್ಲಿ ಕೆಲವು ಉಪಾಯಗಳನ್ನು ತಂದರೆ ಆದಾಯವನ್ನು ಹೆಚ್ಚಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಐಡಿಯಾ ಕೊಟ್ಟಿದ್ದು ಮೆಟ್ರೊ ಪ್ರಯಾಣಿಕರೊಬ್ಬರು. ಅದನ್ನು ಮೆಟ್ರೊ ನಿಗಮದ ಅಧಿಕಾರಿಗಳು ತಕ್ಷಣವೇ ಜಾರಿಗೆ ತಂದರು. ಇದರಿಂದ ಅಧಿಕ ಲಾಭವಾಗಿದೆ. ಮೆಟ್ರೊ ಪ್ರಯಾಣಿಕರ ಕಾರ್ಡುಗಳ ಮಾರಾಟದಲ್ಲಿ ಕಳೆದ ಜುಲೈ 4ರಿಂದ ಗಣನೀಯ ಏರಿಕೆ ಕಂಡುಬಂದಿದ್ದು ಅಲ್ಲಿಂದ 9 ದಿನಗಳು ಸತತ ಆದಾಯದಲ್ಲಿ 1 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆಯಾಗಿದೆ. ಜುಲೈ 4ರಿಂದ ನಿನ್ನೆಯವರೆಗೆ ಸರಾಸರಿ ಪ್ರತಿದಿನ 1800 ಸ್ಮಾರ್ಟ್ ಕಾರ್ಡುಗಳು ಮಾರಾಟವಾಗಿದೆ. ಇದೀಗ ಮೆಟ್ರೊ ಪ್ರಯಾಣ ಕಾರ್ಡು ಪ್ರತಿದಿನ 3ರಿಂದ 3,500ರಷ್ಟು ಮಾರಾಟವಾಗುತ್ತಿದೆ.

ಮೆಟ್ರೊದಲ್ಲಿ ಆಗಾಗ ಸಂಚರಿಸುವ ಮಿಂಟ್ರಾ ಆನ್ ಲೈನ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಘವ್ ಎಸ್ ಮೆಟ್ರೊದಲ್ಲಿ ಹೆಚ್ಚೆಚ್ಚು ಪ್ರಯಾಣಿಕರು ಸಂಚರಿಸುವಂತಾಗಬೇಕೆಂದು ಯೋಚಿಸಿ ಕೆಲ ತಿಂಗಳ ಹಿಂದೆ ಮೆಟ್ರೊ ಅಧಿಕಾರಿಗಳನ್ನು ಸಂಪರ್ಕಿಸಿದರಂತೆ. ಹಳ್ಳಿ ಜನರು ಸೇರಿದಂತೆ ಮೆಟ್ರೊದ ಜೊತೆ ಹೆಚ್ಚೆಚ್ಚು ಪ್ರಯಾಣಿಕರನ್ನು ಬೆಸೆಯುವುದು, ಮೆಟ್ರೊ ರೈಲು ಪ್ರಯಾಣ ಹೆಚ್ಚು ಆಪ್ತವಾಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಅವರು ಕೊಟ್ಟ ಐಡಿಯಾವನ್ನು ಮೆಟ್ರೊ ಅಧಿಕಾರಿಗಳು ಎಲ್ಲಾ 40 ಮೆಟ್ರೊ ನಿಲ್ದಾಣಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ತಿಂಗಳ ಹಿಂದೆ ಪ್ರಕಟಿಸಿದರು.

ಅವರು ಕೊಟ್ಟ ಐಡಿಯಾವೇನು ಗೊತ್ತೆ? ಪ್ರಯಾಣಿಕರಿಗೆ ಆಪ್ತವಾಗುವ ಸಾಲುಗಳನ್ನು ಹಾಕುವುದು. 'ನಮ್ಮ ಮೆಟ್ರೊ: ಎಲ್ಲರೂ ಐಷಾರಾಮಿ ಪ್ರಯಾಣಕ್ಕೆ ಅರ್ಹರು', ನಮ್ಮ ಮೆಟ್ರೊ: ಗಾರ್ಡನ್ ಸಿಟಿಯ ಪ್ರಯಾಣ ಸಹವರ್ತಿ' 'ನಮ್ಮ ರೈತ: ನಮ್ಮ ಹೆಮ್ಮೆಯ ಪುತ್ರ' ಇತ್ಯಾದಿಗಳು. ಮೆಟ್ರೊ ರೈಲು ಪ್ರಯಾಣ ಎಷ್ಟು ಉತ್ತಮ ಎಂದು ಜನರಿಗೆ ಮನದಟ್ಟು ಮಾಡುವ ಸಾಲುಗಳು ಇವೆಲ್ಲ.

ಇದರ ಜೊತೆಗೆ ಮೆಟ್ರೊ ನಿಗಮ ನೀಡುವ ಸ್ಮಾರ್ಟ್ ಕಾರ್ಡು ಬಳಸಿದರೆ ಎನು ಪ್ರಯೋಜನ ಎಂಬುದನ್ನು ಕೂಡ ಎಲ್ಲಾ ನಿಲ್ದಾಣಗಳಲ್ಲಿ ಪ್ರಕಟಿಸಲಾಯಿತು. ನಿಲ್ದಾಣಗಳಲ್ಲಿ ಜಾಗ ಇರುವ ಬೋರ್ಡು ಗಳಲ್ಲೆಲ್ಲಾ ಸಾರ್ವಜನಿಕರಿಗೆ ಮೆಟ್ರೊ ಪ್ರಯಾಣ ಕಾರ್ಡುಗಳನ್ನು ಕೊಂಡರೆ ಎನು ಲಾಭ ಎಂದು ಅಲ್ಲಲ್ಲಿ ತೋರಿಸಲಾಯಿತು. ಪ್ರತಿದಿನ ಸಾಲಿನಲ್ಲಿ ನಿಂತು ಟಿಕೆಟ್ ಗೆ ಟೋಕನ್ ತೆಗೆದುಕೊಳ್ಳುವ ಕಿರಿಕಿರಿ ತಪ್ಪುತ್ತದೆ, ಸಮಯ ಉಳಿತಾಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶೇಕಡಾ 15ರಷ್ಟು ಹಣ ಉಳಿತಾಯ ಮಾಡಬಹುದು ಎಂಬ ಸಾಲುಗಳನ್ನು ಪ್ರಕಟಿಸಿದೆವು ಎನ್ನುತ್ತಾರೆ ಮೆಟ್ರೊದ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್.

ಇದರಿಂದಾಗಿ ಈ ಹಿಂದೆ ಪ್ರತಿದಿನ ಸರಾಸರಿ 95ರಿಂದ 98 ಲಕ್ಷ ಇದ್ದ ಮೆಟ್ರೊ ಆದಾಯ 1 ಕೋಟಿ ರೂಪಾಯಿ ದಾಟಿದೆ. ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಹೊರಗೆ ಸಹ ಮೆಟ್ರೊ ಕಾರ್ಡುಗಳನ್ನು ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT