ರಾಜ್ಯ

ಮಕ್ಕಳನ್ನು ಕಾಪಾಡಲು ಆನ್‍ಲೈನ್‍ನಲ್ಲಿ ಪೋರ್ನ್ ವಿಡಿಯೋ ನಿಷೇಧಿಸಬೇಕು: ನೊಬೆಲ್ ಪುರಸ್ಕೃತ ಸತ್ಯಾರ್ಥಿ

Vishwanath S
ಬೆಂಗಳೂರು: ಮಕ್ಕಳ ರಕ್ಷಣೆಗಾಗಿ ಆನ್‍ಲೈನ್‍ನಲ್ಲಿ ಪೋರ್ನ್ ವಿಡಿಯೋಗಳನ್ನು ನಿಷೇಧಿಸಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. 
ಮಕ್ಕಳ ರಕ್ಷಣೆಗಾಗಿ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲ ಬಳಕೆದಾರರಿಗೆ ದೊರೆಯದಂತೆ ಮಾಡಬೇಕು. ಎಲ್ಲ ಡೇಟಾ ಕಂಪನಿಗಳು ಕಾನೂನಿನಡಿ ಬರಬೇಕು. ಅಲ್ಲದೆ ಇಂತಹ ವಿಡಿಯೋಗಳಿಂದಲೇ ಮಕ್ಕಳ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. 
ಡೀಮ್ಡ್ ವಿವಿಯೊಂದರ ಸಮಾರಂಭದಲ್ಲಿ ಮಾತನಾಡಿದ ಸತ್ಯಾರ್ಥಿ, ಮಕ್ಕಳನ್ನು ದುರುಪಯೋಗ ಪಡೆದುಕೊಳ್ಳುವವರನ್ನು ಎಲ್ಲರೂ ದೂರ ಇಡಬೇಕು. ಧಾರ್ಮಿಕ ಮುಖಂಡರ ಪ್ರಭಾವ ದೊಡ್ಡದಿರುತ್ತದೆ. ಹೀಗಾಗಿ ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅವರು ಪ್ರಯತ್ನಿಸಬೇಕು ಎಂದು ಹೇಳಿದರು. 
ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ದೇವಿ, ಮಾಜಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
SCROLL FOR NEXT