ಪ್ರತ್ಯೇಕ ಅಪಘಾತ: ದಂಪತಿ ಸೇರಿ ಐದು ಸಾವು, ಮೂವರಿಗೆ ಗಾಯ
ತುಮಕೂರು: ಲಾರಿ-ಕ್ಯಾಂಟರ್ ಡಿಕ್ಕಿಯಾಗಿ ದಂಪತಿ ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.
ಶಿರಾದ ದೊಡ್ಡ ಆಲದಮರದ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಂಗಳವಾರ ಬೆಳಗಿನ ಜಾವ ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು ಹನುಮಂತರಾಜು (42) ಪತ್ನಿ ರಾಧಾ(35)ಮತ್ತು ಚಾಲಕ ಲೋಕೇಶ್ (34), ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಲಾರಿ ಡಿಕ್ಕಿಯಾದ ರಭಸಕ್ಕೆ ಕ್ಯಾಂಟರ್ ನಲ್ಲಿದ್ದ ಶವಗಳು ನುಜ್ಜುಗುಜ್ಜಾಗಿದ್ದು ವಾಹನದಿಂದ ಶವ ಹೊರತೆಗೆಯಲು ಪೋಲೀಸರು ಹರಸಾಹಸ ಪಟ್ಟರು.
ಮೃತ ದಂಪತಿ ರಾಣಿಬೆನ್ನೂರಿನ ಕರೂರು ಗ್ರಾಮದವರೆಂದು ತಿಳಿದುಬಂದಿದೆ. ಘಟನೆ ಕುರಿತಂತೆ ಕಳ್ಳಂಬೆಳ್ಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮುಳಬಾಗಿಲು: ಅಪಘಾತಕ್ಕೆ ಇಬ್ಬರು ಬಲಿ
ಕೋಲಾರ ಜಿಲ್ಲೆ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಟ್ರ್ಯಾಕ್ಟರ್ ಹಾಗೂ ವ್ಯಾಗನರ್ ಕಾರ್ ನಡುವೆ ಡಿಕ್ಕಿ ಸಂಭವಿಸಿ ಶಿವು(24)ಮತ್ತು ಕಿರಣ್ (23 ಸ್ಥಳದಲ್ಲೇ ಮೃತರಾಗಿದ್ದಾರೆ.
ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.