ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಉಡುಪಿ: ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿ ನಿಗೂಡ ಸಾವಿನ ಪ್ರಕರಣ ಸಂಬಂಧ ಪಶ್ಚಿಮ ವಲಯ ಡಿಜಿಪಿ ಅರುಣ್ ಚಕ್ರವರ್ತಿ ಮಠಕ್ಕೆ ಭೇಟಿ ನೀಡಿದ್ದರು.
ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವು ದಿನಕ್ಕೆ ಒಂದು ತಿರುವು ಪಡೆಯುತ್ತಿದ್ದು, ಮಠದ ಶ್ರೀಗಳ ಕೊಠಡಿಯಲ್ಲಿ ಕಾಂಡೋಮ್, ಸ್ಯಾನಿಟರಿ ಪ್ಯಾಡ್ ಸೇರಿದಂತೆ ದುಬಾರಿ ಮದ್ಯಗಳು ಲಭ್ಯವಾಗಿದೆ.
ಕೃಷ್ಣಮಠದ ಪಕ್ಕದಲ್ಲಿರುವ ಶೀರೂರು ಮಠದಲ್ಲಿ ಪೊಲೀಸರು ತಪಾಸಣೆ ಕಾರ್ಯಕ್ಕೆ ಮುಂದಾಗಿದ್ದು, ಶ್ರೀಗಳ ಕೊಠಡಿಯಲ್ಲಿ ರಾಶಿರಾಶಿ ಮದ್ಯದ ಬಾಟಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.. ಈ ಕೊಠಡಿಗೆ ಶ್ರೀಗಳನ್ನು ಬಿಟ್ಟು ಮತ್ಯಾರು ತೆರಳುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡುತ್ತಿದ್ದೇವೆ, ಶಿರೂರು ಮೂಲ ಮಠದಲ್ಲಿ ಅಳವಡಿಸಿದ್ದ ಕ್ಯಾಮೆರಾ ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಇದುವರೆಗೂ ಪ್ರಕರಣ ಸಂಬಂಧ ಯಾರನ್ನು ಬಂಧಿಸಿಲ್ಲ ಎಂದು ಐಜಿಪಿ ತಿಳಿಸಿದ್ದಾರೆ.
ಶಿರೂರು ಶ್ರೀ ಸಾವಿನ ಪ್ರಕರಣ ಸಂಬಂಧ ಮಹಿಳೆಯೊರ್ವಳನ್ನು ಬಂಧಿಸಲಾಗಿದೆ ಎಂಬ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಉಡುಪಿ ಎಸ್ ಪಿ ಲಕ್ಷ್ಣಣ್ ನಿಂಬರ್ಗಿ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.