ಸಾಂದರ್ಭಿಕ ಚಿತ್ರ 
ರಾಜ್ಯ

ಮುರುಡೇಶ್ವರ: ಸಮುದ್ರದ ಅಲೆಗಳ ಮಧ್ಯೆ ಕೊಚ್ಚಿ ಹೋದ ಬೆಂಗಳೂರು ಯುವಕ

ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಸಮುದ್ರಕ್ಕಿಳಿದಾಗ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಭಟ್ಕಳ: ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಸಮುದ್ರಕ್ಕಿಳಿದಾಗ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನ ಕಿರಣಕುಮಾರ್(18)  ಸಮುದ್ರದಲ್ಲಿ ಮುಳುಗಿದ ಯುವಕ ಎನ್ನಲಾಗಿದ್ದು ಈತ ಒಂಭತ್ತು ಮಂದಿ ಕುಟುಂಬ ಸದಸ್ಯರೊಡನೆ ಮುರುಡೇಶ್ವರ ಪ್ರವಾಸಕ್ಕಾಗಿ ಆಗಮಿಸಿದ್ದ. ಇದರಲ್ಲಿ ನಾಲ್ವರು ಸಮುದ್ರಕ್ಕೆ ಇಳಿದು ಅಲೆಗಳೊಡನೆ ಆಟವಾಡುತ್ತಿದ್ದರು. ಆಗ ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ಇಬ್ಬರು ಅಪಾಯದಲ್ಲಿ ಸಿಲುಕಿದ್ದಾರೆ. 
ಇದನ್ನು ಗಮನಿಸಿದ ಸ್ಥಳೀಯರು ಹಾಗೂ ರಕ್ಷಣಾ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿದ್ದು ಕಾರ್ತಿಕ್ ಮುನಿರಾಜು (20) ಎನ್ನುವ ಒಬ್ಬನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕಿರಣಕುಮಾರ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಬೆಂಗಳೂರಿನ ಯಲಹಂಕದ ಮೂಲದ ಕಿರಣಕುಮಾರ್ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟನ್ ರೈಲಿನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಇರಿತ: 9 ಜನರ ಸ್ಥಿತಿ ಗಂಭೀರ, ಇಬ್ಬರು ಶಂಕಿತರ ಬಂಧನ

ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ.ಶಿವಕುಮಾರ್

ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ದಾಖಲೆಯ ಬಹುಮಾನ? ಪುರುಷ ತಂಡಕ್ಕೆ ಸರಿಸಮಾನವಾದ ಮೊತ್ತ!

ಹೃದಯವಿದ್ರಾವಕ ಘಟನೆ, ಹಸುಗಳ ಬಾಲ ಕತ್ತರಿಸಿ ವಿಕೃತಿ, ಕಿಡಿಗೇಡಿಗಳ ವಿರುದ್ಧ ವ್ಯಾಪಕ ಆಕ್ರೋಶ

ಇನ್ನು ಸಿಎಂ, ಸಚಿವರ ಭೇಟಿಯಾಗುವುದು ಸುಲಭ...! ಹೇಗಂತೀರಾ ಇಲ್ಲಿದೆ ಮಾಹಿತಿ...

SCROLL FOR NEXT