ಬೆಂಗಳೂರು: ಜಾಹಿರಾತು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಬಿಬಿಎಂ ಆದೇಶ ಹೊರಡಿಸಿದ್ದು, ನಿಯಮ ಪಾಲಿಸದ ಜಾಹಿರಾತು ಸಂಸ್ಥೆಗಳ ಪರವಾನಗಿ ರದ್ದ ಮಾಡುವುದಾಗಿ ಹೇಳಿದೆ.
ಪ್ರಮುಖವಾಗಿ ಖಾಸಗಿ ಸಂಸ್ಥೆಗಳ ನಾಮ ಫಲಕ ಮತ್ತು ಜಾಹಿರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಬಿಬಿಎಂಬಿ ಆದೇಶ ಹೊರಡಿಸಿದೆ. ಅಂತೆಯೇ ನಿಯಮ ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಆತಂಹ ಸಂಸ್ಥೆಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಹೇಳಿದೆ.
ಶನಿವಾರ ಬಿಬಿಎಂಪಿ ಮೇಯರ್ ರನ್ನು ಭೇಟಿಮಾಡಿದ್ದ ಕನ್ನಡ ಪರ ಸಂಘಟೆನೆಗಳ ಕಾರ್ಯಕರ್ತರು ಈ ಬಗ್ಗೆ ಮನವಿ ಮಾಡಿದ್ದರು. ಅಂತೆಯೇ ಕನ್ನಡೇತರ ಜಾಹಿರಾತು ಫಲಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಕಾರ್ಯಕರ್ತರಿಗೆ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ ಮೇಯರ್ ಕಾರ್ಯಾಚರಣೆ ನಡೆಸಿ ಕನ್ನಡೇತರ ನಾಮಫಲಕ ಮತ್ತು ಜಾಹಿರಾತು ಫಲಕಗಳನ್ನು ತೆರವುಗೊಳಿಸುತ್ತೇವೆ. ಅಲ್ಲದೆ ಸಂಬಂಧ ಪಟ್ಟ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಮೇಯರ್, ಕರ್ನಾಟಕ ವಾಣಿಜ್ಯ ಕಾಯ್ದೆ ಅನ್ವ.ಯ ನಾಮಫಲಕ ಮತ್ತು ಜಾಹಿರಾತು ಫಲಕಗಳಲ್ಲಿ ಕನ್ನಡ ಕಡ್ಡಾಯ. ನಿಮಯ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಾಮಫಲಕದ ಶೇ.6ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಡಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics