ರಾಜ್ಯ

ರಾಜಭವನದಲ್ಲಿ ನಾಯಕರ ಪ್ರಮಾಣವಚನ: ಬೆಂಬಲಿಗರ ಶೌಚಾಲಯವಾಯ್ತು ವಿಧಾನಸೌಧದ ಹುಲ್ಲು ಹಾಸು!

Shilpa D
ಬೆಂಗಳೂರು: ಬುಧವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಶಾಸಕರು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿ ಕುಮಾರ ಸ್ವಾಮಿ ಅವರ ಸಂಪುಟ ಸೇರಿಕೊಂಡರು. 
ಆದರೇ ಇದೇ ವೇಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೋಡಲು ಬಂದಿದ್ದ ರಾಜಕೀಯ ನಾಯಕರುಗಳ ಬೆಂಬಲಿಗರು ವಿಧಾನ ಸೌಧದ ಆವರಣದಲ್ಲಿರುವ ಹುಲ್ಲು ಹಾಸನ್ನು ಸಾರ್ವಜನಿಕ ಶೌಚಾಲಯನ್ನಾಗಿ ಮಾರ್ಪಡಿಸಿದ್ದಾರೆ.
ವಿಧಾನಸೌಧದ ಪಕ್ಕದಲ್ಲಿರುವ ರಾಜಭವನ ರಸ್ತೆಯಲ್ಲಿ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು, ಆದರೆ ಅಕ್ಕಪಕ್ಕದಲ್ಲಿ ಎಲ್ಲಿಯೂ ಶೌಚಾಲಯ ವಿಲ್ಲದ ಕಾರಣ ವಿಧಾನವ ಸೌಧದ ಆವರಣದಲ್ಲಿರುವ ಹುಲ್ಲುಹಾಸನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ.
ಭದ್ರತೆ ದೃಷ್ಠಿಯಿಂದ ವಿಧಾನೌಧದ ಒಳಗೆ ನಮಗೆ ಪ್ರವೇಶಿಸಲು ಬಿಡಲಿಲ್ಲ,ಅಕ್ಕಪಕ್ಕದಲ್ಲಿ ಕೇವಲ ಸ್ಚಾರ್ ಹೋಟೆಲ್ ಗಳು ಮಾತ್ರ ಇದ್ದವು. ಅಲ್ಲಿ ನಮಗೆ ಪ್ರವೇಶವಿರಲಿಲ್ಲ, ನಮ್ಮ ನೈಸರ್ಗಿಕ ಕರೆಯನ್ನು ಪೂರೈಸಿಕೊಳ್ಳಲು ಸಿಕ್ಕಿದ್ದು ಹುಲ್ಲುಹಾಸು ಎಂದು ಬೇರೆ ಜಿಲ್ಲೆಯಿಂದ ಬಂದಿದ್ದ ಮಹೇಶ್ ಚಂದ್ರ ಎಂಬವರು ಹೇಳಿದ್ದಾರೆ.
ರಾಜಕಾರಣಿಗಳ ಬೆಂಬಲಿಗರು ಬಂದಿದ್ದ ಕಾರುಗಳನ್ನು ರಾಜಭವನದ ಒಳಗೆ ಬಿಡಲಿಲ್ಲ. ಹಲವು ಕಾರುಗಳನ್ನು ಅಂಬೇಡ್ಕರ್ ವೀದಿಯಲ್ಲಿ ನಿಲ್ಲಿಸಲಾಗಿತ್ತು.  ಕೆಲವು ವಿಧಾನ ಸೌಧದ ಮುಂದೆ ಮತ್ತು ಜನರಲ್ ಪೋಸ್ಟ್ ಆಫೀಸ್ ಮುಂದೆ ಪಾರ್ಕಿಂಗ್ ಮಾಡಲಾಗಿತ್ತು. ಈ ಬಾಗದ ಹಲವು ರಸ್ತೆಗಳಲ್ಲಿ  ಡ್ರಾಫಿಕ್ ಜಾಮ್ ಉಂಟಾಗಿತ್ತು.
SCROLL FOR NEXT