ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕಾರೊಳಗೆ ಉಸಿರುಗಟ್ಟಿ ಜೋಡಿಗಳ ಸಾವು

ತಾಂತ್ರಿಕ ದೋಷ ಉಂಟಾಗಿ ಹವಾ ನಿಯಂತ್ರಿತ ಕಾರಿನಲ್ಲಿ ಉಸಿರುಗಟ್ಟಿ ಜೋಡಿಗಳು ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಸಮೀಪದ ಐಟಿಐ ಲೇಔಟ್'ನಲ್ಲಿ ನಡೆದಿದೆ...

ಬೆಂಗಳೂರು: ತಾಂತ್ರಿಕ ದೋಷ ಉಂಟಾಗಿ ಹವಾ ನಿಯಂತ್ರಿತ ಕಾರಿನಲ್ಲಿ ಉಸಿರುಗಟ್ಟಿ ಜೋಡಿಗಳು ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಸಮೀಪದ ಐಟಿಐ ಲೇಔಟ್'ನಲ್ಲಿ ನಡೆದಿದೆ. 
ಐಟಿಐ ಲೇಔಟ್ ನಿವಾಸಿಯಾಗಿರುವ 30 ವರ್ಷದ ವಿವಾಹಿತ ಹಾಗೂ 28 ವರ್ಷದ ವರ್ಷದ ಆತನ ಸಂಬಂಧಿಕ ಮಹಿಳೆ ಮೃತ ದುರ್ದೈವಿಗಳಾಗಿದ್ದಾರೆ. 
ತಮ್ಮ ಮನೆ ಶೆಡ್ ನಲ್ಲಿ ರಾತ್ರಿ ಕಾರು ನಿಲ್ಲಿಸಿ ತನ್ನ ಬಂಧುವಿನ ಜೊತೆ ವಿವಾಹಿತ ವ್ಯಕ್ತಿ ಇದ್ದರು. ಈ ಆಪ್ತ ಗಳಿಗೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಇಬ್ಬರು ಮೃತಪಟ್ಟಿದ್ದಾರೆ. ಬೆಳಿಗ್ಗೆ ಕಾರಿನ ಶೆಡ್ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. 
ಇಬ್ಬರು ಇತರೆ ವ್ಯಕ್ತಿಗಳನ್ನು ವಿವಾಹವಾಗಿದ್ದು, ವಿವಾಹದ ಬಳಿಕವೂ ಅನೈತಿಕ ಸಂಬಂಧವನ್ನು ಹೊಂದಿದ್ದರು. ಮೃತಪಟ್ಟಿರುವ ಇಬ್ಬರಿಗೂ ಮಕ್ಕಳಿದ್ದಾರೆ. 
ಸೆಕೆಂಡ್ ಹ್ಯಾಂಡ್ ಕಾರುಗಳ ಏಜೆಂಟ್ ಆಗಿದ್ದ ವ್ಯಕ್ತಿ, ತನ್ನ ಸಂಬಂಧಿಕ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. 
ಬುಧವಾರ ರಾತ್ರಿ ಮಹಿಳೆ ಜೊತೆಗೆ ಮನೆಗೆ ಬಂದ ವ್ಯಕ್ತಿ, ಬಳಿಕ ಕಾರನ್ನು ಶೆಡ್'ನಲ್ಲಿ ನಿಲ್ಲಿಸಿದ್ದಾರೆ. ಶೆಟರ್ ಎಳೆದು ಕಾರಿನೊಳಗೆ ಸೇರಿದ ಅವರು, ನಂತರ ಕಾರಿನ ಬಾಗಿಲು ಬಂದ್ ಮಾಡಿದ್ದಾರೆ. ನಂತರ ಎಸಿ ಆನ್ ಮಾಡಿ ಇಬ್ಬರೂ ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ಈ ವೇಳೆ ಕಾರಿನ ಇಂಧನ ಸಹ ಖಾಲಿಯಾಗಿದೆ. ಶೆಟ್ ಹಾಗೂ ಕಾರಿನ ಬಾಗಿಲು ಬಂದ್ ಮಾಡಿದ್ದರಿಂದಾಗಿ ಗಾಳಿ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. 
ಹೀಗಾಗಿ ಕಾರಿನಲ್ಲಿ ಏಸಿ ಹೊರಸೂಸುತ್ತಿದ್ದ ಕಾರ್ಬನ್ ಮಾಲಾಕ್ಸೈಡ್ ಹೊರಗೆ ಹೋಗಲಾಗದಂತೆ ಕಾರಿನೊಳಗೆ ಆವರಿಸಿಕೊಂಡಿದೆ. ಇದರಿಂದ ಅವರಿಬ್ಬರು ವಿಷ ಅನಿಲ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 
ಗುರುವಾರ ಬೆಳಿಗ್ಗೆ ಮೃತನ ತಂದೆ ಕಾರು ಶೆಟ್ ತೆಗೆದಾಗ ಕಾರಿನೊಳಗೆ ಮೃತದೇಹಗಳು ಪತ್ತೆಯಾಗಿವೆ. ಕೂಡಲೇ ಅವರು ಕಾರಿನ ಕಿಟಕಿ ಗಾಜು ಹೊಡೆದು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ. 
ಮೃತರ ಕುಟುಂಬದವರ ದೂರು ಆಧರಿಸಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!