ಬೆಂಗಳೂರು: ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ಯಾಂಟೀನ್ ಆಹಾರವನ್ನು ಸೇವಿಸಬೇಕು ಎಂಬ ಶಾಲೆಯ ಆದೇಶವನ್ನು ವಿರೋಧಿಸಿ ಸರ್ಜಾಪುರ ರಸ್ತೆಯ ಗ್ರೀನ್ ವುಡ್ ಪ್ರೌಢಶಾಲೆಯ ಮುಂಭಾಗ ಪೋಷಕರು ನಿನ್ನೆ ಪ್ರತಿಭಟನೆ ನಡೆಸಿದರು.
ಈ ವರ್ಷದ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಕ್ಯಾಂಟೀನ್ ಆಹಾರವನ್ನೇ ಸೇವಿಸಬೇಕು ಎಂಬ ಆದೇಶವನ್ನು ಶಾಲಾ ಆಡಳಿತ ಮಂಡಳಿ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದರು.
ಮನೆಯಿಂದ ಊಟ ಕಳುಹಿಸಿದ್ದರೂ ಸಹ ಕ್ಯಾಂಟೀನ್ ಆಹಾರಕ್ಕಾಗಿ ಶಾಲೆ ಶುಲ್ಕ ವಸೂಲಿ ಮಾಡುತ್ತಿದೆ. ಅದಕ್ಕಾಗಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದಾಗಿ ಪೋಷಕರು ತಿಳಿಸಿದರು.
ತಮ್ಮ ಮಕ್ಕಳಿಗೆ ಮನೆಯಿಂದಲೇ ಊಟ ಕಳುಹಿಸಿಕೊಡಲು ಸಿದ್ದರಿದ್ದೇವೆ. ಹೊರಗಿನ ಊಟದ ಅಗತ್ಯವಿಲ್ಲ. ಹೇಗೆ ಶಾಲಾ ಇಂತಹ ಆದೇಶವನ್ನು ಹೊರಡಿಸುತ್ತದೆ ಎಂದು ಮತ್ತೊಬ್ಬ ಪೋಷಕರು ಪ್ರಶ್ನಿಸಿದರು.
ಮಕ್ಕಳು ಮನೆಯಿಂದ ಊಟ ತಂದರೂ ಕೂಡಾ ಈ ವರ್ಷದಿಂದ ಸುಮಾರು 40 ಸಾವಿರ ಕ್ಯಾಂಟೀನ್ ಶುಲ್ಕವನ್ನು ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಿರುವ ಪೋಷಕರು, ಹೊಸ ಆದೇಶ ಭಾರತೀಯ ಶಾಲಾ ಕಾನೂನು ಸಮಿತಿಯ ವಿರುದ್ಧವಾಗಿದೆ. ಆಹಾರದ ಮೆನು ಗುಣಮಟ್ಟದ ಬಗ್ಗೆ ಏನನ್ನೂ ವಿವರಿಸಿಲ್ಲ ಎಂದು ಪ್ರಾಂಶುಪಾಲರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.