ರಾಜ್ಯ

ಬೆಂಗಳೂರು: ಆರ್.ಜಿ.ಎಚ್.ಎಚ್.ಎಸ್ ಕ್ಯಾಂಪಸ್ ತಕ್ಷಣ ಸ್ಥಳಾಂತರಿಸಿ- ಸಚಿವ ಡಿಕೆಶಿ ನಿರ್ದೇಶನ

Raghavendra Adiga
ಬೆಂಗಳೂರು: ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ  ಕ್ಯಾಂಪಸ್ ನ್ನು ರಾಮನಗರಕ್ಕೆ ಸ್ಥಳಾಂತರಿಸುವಂತೆ ಆರ್.ಜಿ.ಎಚ್.ಎಚ್.ಎಸ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ವಿಶ್ವವಿದ್ಯಾನಿಲಯದ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ತಮ್ಮ ಮೊದಲ ಸಭೆಯಲ್ಲಿ ಸಚಿವರು ತಕ್ಷಣವೇ  ಕ್ಯಾಂಪಸ್ ಸ್ಥಳಾಂತರವಾಗಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯೊಬ್ಬರು ಎಕ್ಸ್ ಪ್ರೆಸ್ ಗೆ ಈ ವಿಚಾರ ತಿಳಿಸಿದ್ದಾರೆ.
ಸ್ಥಳಾಂತರಕ್ಕೆ ಭೂ ವಿವಾದದ ತೊಡಕಿರುವುದಾಗಿ ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. "ನಾವು ಸಚಿವರಿಗೆ ವಿವಾದದ ಕುರಿತಂತೆ ಮನವರಿಕೆ ಮಾಡಿಕೊಡಲು ಮುಂದಾದೆವು. ಆದರೆ ಸಚಿವರು ಎಲ್ಲಾ ಸಮಸ್ಯೆಗಳೂ ಪರಿಹಾರವಾಗಲಿದೆ, ಮೊದಲು ಕ್ಯಾಂಪಸ್ ನ್ನು ಸ್ಥಳಾಂತರಿಸಿ ಎಂದರು: ಅಧಿಕಾರಿಗಳು ಹೇಳಿದ್ದಾರೆ. ಕ್ಯಾಂಪಸ್ ಸ್ಥಳಾಂತರ ಕುರಿತಂತೆ ಬಾಕಿ ಉಳಿದಿರುವ ನ್ಯಾಯಾಲಯ ಪ್ರಕರಣಗಳ ವಿವರಗಳನ್ನು ಪಡೆಯಲು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಶಿವಕುಮಾರ್ ಸೂಚಿಸಿದ್ದಾರೆ.
ಆರ್.ಜಿ.ಎಚ್.ಎಚ್ಎಸ್ ಕ್ಯಾಂಪಸ್ ನ್ನು ರಾಮನಗರಕ್ಕೆ ವರ್ಗಾಯಿಸುವುದು ಸಚಿವ ಡಿಕೆಶಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರಿಗೂ ಪ್ರತಿಷ್ಠೆಯ ವಿಚಾರವಾಗಿದೆ. ಕ್ಯಾಂಪಸ್ ಸ್ಥಳಾತರಕ್ಕಾಗಿ ಸರ್ಕಾರ ನೀಡಿದ್ದ 70 ಎಕರೆ ಭೂಮಿಯಲ್ಲಿ 16 ಎಕರೆ ಜಾಗ ವಿವಾದದಲ್ಲಿದೆ. ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದ್ದು ಹೈಕೋರ್ಟ್ ಕ್ಯಾಂಪಸ್ ಸ್ಥಳಾಂತರಕ್ಕೆ ತಡೆ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಇತ್ತೀಚೆಗೆ ಕ್ಯಾಂಪಸ್ ಸ್ಥಳಾಂತರಿಸುವುದರ ಬಗ್ಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅವರು ಎಲ್ಲಾ ಅಡಚಣೆಗಳನ್ನೂ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದ
SCROLL FOR NEXT