ಬೆಂಗಳೂರು ವಿಶ್ವವಿದ್ಯಾನಿಲಯ, ಆರ್.ಜಿ.ಎಚ್.ಎಚ್.ಎಸ್ ಗೆ ನೂತನ ಉಪಕುಲಪತಿಗಳ ನೇಮಕ 
ರಾಜ್ಯ

ಬೆಂಗಳೂರು ವಿಶ್ವವಿದ್ಯಾನಿಲಯ, ಆರ್.ಜಿ.ಎಚ್.ಎಚ್.ಎಸ್ ಗೆ ನೂತನ ಉಪಕುಲಪತಿಗಳ ನೇಮಕ

ದೀರ್ಘ ಕಾಲದ ನಿರೀಕ್ಷೆ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲ್ಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳಿಗೆ ಕೊನೆಗೂ ನೂತನ ಉಪಕುಲಪತಿಗಳ ನೇಮಕವಾಗಿದೆ.

ಬೆಂಗಳೂರು: ದೀರ್ಘ ಕಾಲದ ನಿರೀಕ್ಷೆ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲ್ಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳಿಗೆ ಕೊನೆಗೂ ನೂತನ  ಉಪಕುಲಪತಿಗಳ ನೇಮಕವಾಗಿದೆ.
ವಿಶ್ವವಿದ್ಯಾನಿಲಯಗಳ ಕುಲಪತಿಗಳಾದ ರಾಜ್ಯಪಾಲ ವಜುಭಾಯಿ ವಾಲಾ ಮಂಗಳವಾರ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯದ ಮಾಜಿ ಪ್ರಾಂಶುಪಾಲ ಕೆ ಆರ್ ವೇಣುಗೋಪಾಲ್ ಅವರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನಾಗಿ, ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾಗಿರುವ ಡಾ. ಸಚ್ಚಿದಾನಂದ ಅವರನ್ನು ಆರ್.ಜಿ.ಎಚ್.ಎಚ್.ಎಸ್ ನ ಉಪಕುಲಪತಿಗಳನ್ನಾಗಿಯೂ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರೊಫೆಸರ್ ಈಶ್ವರ ಭಟ್ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಗಳಾಗಿ ನೇಮಕವಾಗಿದ್ದಾರೆ.
ಡಾ. ಬಿ. ತಿಮ್ಮೇಗೌಡ  ಅವರ ಅವಧಿ ಫೆಬ್ರವರಿ 6, 2017ರಂದು ಕೊನೆಗೊಂಡ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯವು ಸುಮಾರು ಒಂದೂವರೆ ವರ್ಷಗಳ ಕಾಲ ಐದು ತಾತ್ಕಾಲಿಕ ವಿಸಿ ಗಳನ್ನು ಕಂಡಿತ್ತು.
ಇನ್ನು ಆರ್.ಕೆ.ಎಚ್.ಎಚ್.ಎಸ್ ನವಿಚಾರವಾಗಿ ಹೇಳುವುದಾದರೆ ಜುಲೈ 14, 2017ರಿಂದಲೂ ಇಲ್ಲಿನ ಉಪಕುಲಪತಿಗಳ ಹುದ್ದೆ ಖಾಲಿ ಉಳಿದಿತ್ತು. ಡಾ. ಕೆ ಎಸ್ ರವೀಂದ್ರನಾಥ್ ಅವರ ಸೇವಾವಧಿ ಪೂರ್ಣಗೊಂಡ ಬಳಿಕ ಯಾವುದೇ ಉಪಕುಲಪತಿಗಳ ನೇಮಕವಾಗಿರಲಿಲ್ಲ. ಬದಲಿಗೆ ಮೌಲ್ಯಮಾಪನ ರಿಜಿಸ್ಟರ್ ಆಗಿರುವ ಡಾ.ಎಂ. ಕೆ. ರಮೇಶ್, ಅವರನ್ನೇ ತಾತ್ಕಾಲಿಕ ವಿಸಿ ಆಗಿ ನೇಮಕ ಮಾಡಿ ಆದೇಶ ನೀಡಲಾಗಿತ್ತು.
ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಗಳಾಗಿ ವೇಣುಗೋಪಾಲ್ ಮಂಗಳವಾರದಂದು ಅಧಿಕಾರ ಸ್ವೀಕರಿಸಿದ್ದು "ನಾನು ವಿಶ್ವವಿದ್ಯಾನಿಲಯದಗುಣಮಟ್ಟದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಮತ್ತು ಇದಾಗಲೇ ಬೆಂಗಳೂರು ವಿಶ್ವವಿದ್ಯಾನಿಲಯದೊಡನೆ ಸೇರಿ ಕಾರ್ಯಾಚರಿಸುತ್ತಿರುವ ಇನ್ನೆರಡು ವಿವಿಗಳ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತೇನೆ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel