ಮುಖ್ಯ ಕಾರ್ಯದರ್ಶಿ ಹುದ್ದೆ: ಪಟ್ಟನಾಯಕ್, ವಿಜಯ್ ಭಾಸ್ಕರ್ ನಡುವೆ ತೀವ್ರ ಪೈಪೋಟಿ 
ರಾಜ್ಯ

ಮುಖ್ಯ ಕಾರ್ಯದರ್ಶಿ ಹುದ್ದೆ: ಪಟ್ಟನಾಯಕ್, ವಿಜಯ್ ಭಾಸ್ಕರ್ ನಡುವೆ ತೀವ್ರ ಪೈಪೋಟಿ

: ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೂನ್ 30ರ್ಂದು ನಿವೃತ್ತರಾಗುತ್ತಿದ್ದಾರೆ, ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುವುದು ಎನ್ನುವ್ದರ ಕುರಿತಂತೆ....

ಬೆಂಗಳೂರು: ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೂನ್ 30ರ್ಂದು ನಿವೃತ್ತರಾಗುತ್ತಿದ್ದಾರೆ,  ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುವುದು ಎನ್ನುವ್ದರ ಕುರಿತಂತೆ ಈಗಾಗಲೇ ಊಹಾಪೋಹಗಳು ಪ್ರಾರಂಭವಾಗಿದೆ.
ಮಾರ್ಚ್ ನಲ್ಲಿಯೇ ನಿವೃತ್ತರಾಗಬೇಕಾಗಿದ್ದ ಅಧಿಕಾರಿ ರತ್ನಪ್ರಭಾ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಗಿತ್ತು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಟಿಎಂ ವಿಜಯ್ ಭಾಸ್ಕರ್ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಎಲ್ಲಾ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಪ್ರಸ್ತುತ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಎಸ್ ಕೆ  ಪಟ್ಟನಾಯಕ್ ಸಹ ಕಾರ್ಯದರ್ಶಿ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ.
2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುನಗೊಳಿಸುವ ನರೇಂದ್ರ ಮೋದಿ ಸರ್ಕಾರದ ಯೋಜನೆಯಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
1982 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಪಟ್ಟದನಾಯಕ್ 1983 ಐಎಎಸ್ ಬ್ಯಾಚ್ ನ ಭಾಸ್ಕರ್ ಅವರಿಗಿಂತ ಹಿರಿಯರಿದ್ದಾರೆ. ರಾಜ್ಯಾಡಳಿತದ ಸಂಬಂಧ ಹೆಚ್ಚು ಅನುಭವ ಹೊಂದಿರುವ ಪಟ್ಟದನಾಯಕ್ ಹುದ್ದೆಗೆ ನೇಮಕವಾಗುವವರಲ್ಲಿ ಮುಂಚೂಣಿ ಅಭ್ಯರ್ಥಿ ಎನ್ನಲಾಗಿದೆ.
ಆದರೆ ವಿಜಯ್ ಭಾಸಕರ್ ಕರ್ನಾಟಕದವರೇ ಆಗಿರುವುದು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಲು ಮಹತ್ವದ ಅರ್ಹತೆ ಎಂದು ಹೇಳಲಾಗಿದೆ. ಪಟ್ಟದನಾಯಕ್ ಮೂಲತಃಅ ಒಡಿಶಾದವರೆನ್ನುವುದು ಇಲ್ಲಿ ಗಮನಾರ್ಹ ಅಂಶ.
ಹೀಗಿದ್ದರೂ ಪಟ್ಟನಾಯಕ್ ಕರ್ನಾಟಕದಲ್ಲಿ ಸೇವೆ ಮಾಡಲು ಬಯಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಸ್ಕರ್ ಹೊರತಾಗಿ ಅವರಿಗೇ ಆದ್ಯತೆ ನೀಡುವ ಸಾಧ್ಯತೆಯೂ ಇದೆ. ಆದರೆ ಮೂಲಗಳು ಅದನ್ನು ತಳ್ಳಿ ಹಾಕಿವೆ. ಏಕೆಂದರೆ ಒಂದು ವೇಳೆ ಪಟ್ಟನಾಯಕ್ ರಾಜ್ಯ ಮುಖ್ಯ ಕಾರ್ಯದರ್ಶಿ ಆಗಿ ನೇಮಕವಾದಲ್ಲಿ ಅವರ ಅಧಿಕಾರಾವಧಿ ಕೇವಲ ಮೂರು ತಿಂಗಳಿಗೆ ಸೀಮಿತವಾಗಲಿದೆ.  ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗುವವರಿದ್ದಾರೆ.
ಇದೇ ವೇಳೆ ಭಾಸ್ಕರ್ ಅವರ ಸೇವಾವಧಿ ಇನ್ನೂ ಎರಡೂ ವರೆ ವರ್ಷಗಾಳಷ್ಟು ಸುದೀರ್ಘವಾಗಿದೆ. ಹೀಗಾಗಿ ಅವರೇನಾದರೂ ಆಡಳಿತ ಮುಖ್ಯ ಹುದ್ದೆಗೇರಿದರೆ ಅವರು ಡಿಸೆಂಬರ್ 31, 2020 ರ ವರೆಗೆ  ಅಧಿಉಕಾರದಲ್ಲಿ ಮುಂದುವರಿಯಬಹುದು ಎನ್ನುವ ಲೆಕ್ಕಾಚಾರವಿದೆ. ಏತನ್ಮಧ್ಯೆ  1984 ರ ಬ್ಯಾಚ್ ನ ಐಎ ಎಸ್ ಅಧಿಕಾರಿ ಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಡಿವಿ ಪ್ರಸಾದ್ ಹೆಸರು ಸಹ ಗಣನೆಗೆ ಬರುತ್ತಲಿದೆ ಎನ್ನುವುದು ವಿಶೇಷ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT