ಬೆಂಗಳೂರು: ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಪ್ರಕರಣದಲ್ಲಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ ಎಂದು ದುಷ್ಕರ್ಮಿಗಳಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಕುಟುಂಬ ಸಮಾಧಾನ ವ್ಯಕ್ತಪಡಿಸಿದೆ.
ತನ್ನ ಸೋದರಿಯ ಹತ್ಯೆಯ ತನಿಖೆಯ ಕುರಿತಂತೆ ತೃಪ್ತಿ ವ್ಯಕ್ತಪಡಿಸಿರುವ ಕವಿತಾ ಲಂಕೇಶ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ.
ಗೌರಿ ಲಂಕೇಶ್ಇ ಹತ್ಯೆ ತನಿಖೆಗಾಗಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿ.ಕೆ. ಸಿಂಗ್ ಮತ್ತು ತನಿಖಾಧಿಕಾರಿ ಎಮ್ ಎನ್ ಅನುಚೇತ್ ನೇತೃತ್ವದ ಎಸ್ಐಟಿಯನ್ನು ಸಿದ್ದರಾಮಯ್ಯ ಸರ್ಕಾರ ನೇಮಕ ಮಾಡಿತ್ತು. ಇದುವರೆಗೆ ಪರಶುರಾಮ ವಾಗ್ಮೋರೆ ಸೇರಿ ಆರು ಜನರನ್ನು ಎಸ್ಐಟಿ ವಶಕ್ಕೆ ಪಡೆದಿದೆ.
"ಅಕ್ಕನ ಹತ್ಯೆ ಸಂಬಂಧ ಪರಶುರಾಮ ಎನ್ನುವ ವ್ಯಕ್ತಿಯ ಬಂಧನವಾಗಿದೆ. ಹೆಚ್ಚಿನ ತನಿಖೆ ಆಗಬೇಕಿದೆ. ಆದರೆ ಈ ತನಿಖೆ ತಾರ್ಕಿಕ ಅಂತ್ಯವನ್ನು ಮುಟ್ಟಲಿದೆಯೆ ಎಂದು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ" ಸಿದ್ದರಾಮಯ್ಯನವರನ್ನು ಭೇಟಿಯಾದ ಬಳಿಕ ಕವಿತಾ ಲಂಕೇಶ್ ಹೇಳಿದರು.
ಬಂಧಿತ ವ್ಯಕ್ತಿಯು 'ಕೊಲೆಗಾರನಾಗಿದ್ದಾನೆ' ಎನ್ನಲಾಗುತ್ತಿದೆ.ಆದರೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.ಐಜಿಪಿ ಸಿಂಗ್ ನಡೆಸುತ್ತಿರುವ ಈ ತನಿಖೆಯ ಬಗೆಗೆ ನನಗೆ ಭರವಸೆ ಇದೆ ಎಂದು ಕವಿತಾ ನುಡಿದರು.
"ನಾವುಗಳು ಐಜಿಪಿ ಸಿಂಗ್ ಅವರಲ್ಲಿ ನಂಬಿಕೆ ಇಟ್ಟಿದ್ದೇವೆ.ಬಿ.ಕೆ.ಸಿಂಗ್ ಹಾಗೂ 100 ಸಿಬ್ಬಂದಿಗಳು ಪ್ರಕರಣ ಸಂಬಂಧ ಬಹಳ ಕಾಳಜಿ ವಹಿಸಿದ್ದಾರೆ"
ಎಸ್ಐಟಿ ನಿಷ್ಪಕ್ಷಪಾತದಿಂದ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ ಎಂದು ಕವಿತಾ ಹೇಳಿದ್ದಾರೆ.
"ಅವರು ನಮ್ಮನ್ನೂ ವಿಚಾರಣೆ ನಡೆಸಿದ್ದರು. ತಾಯಿಯ ಹತ್ಯೆಯಲ್ಲಿ ನಕ್ಸಲ್ ಒಳಗೊಳ್ಳುವಿಕೆ ಸಂಬಂಧ ನಮಗೆ ಪ್ರಶ್ನಿಸಲಾಗಿತ್ತು. ಅವರು ಆ ಆಯಾಮದಿಂದ ಸಹ ತನಿಖೆ ನಡೆಸಿದ್ದಾರೆ.ಎಲ್ಲಾ ಸಾಧ್ಯತೆಗಳನ್ನು ನೋಡಿದ ಬಳಿಕ ಅಂತಿಮವಾಗಿ ಅವರು ಈ ಹಂತವನ್ನು ತಲುಪಿದರು.ಆದ್ದರಿಂದ ನಮಗೆ ನ್ಯಾಯ ಸಿಗಲಿದೆಎಂದು ನಾವು ಭಾವಿಸುತ್ತೇವೆ" ಕವಿತಾ ಲಂಕೇಶ್ ನುಡಿದರು.
ಪತ್ರಕರ್ತೆ, ವಿಮರ್ಶಕಿಯಾದ ಗೌರಿ ಲಂಕೇಶ್ ಕಳೆದ ವರ್ಷ ಸೆಪ್ಟೆಂಬರ್ 5 ರಂದು ತನ್ನ ಮನೆಯ ಮುಂದೆಯೇ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು.