ಮಳೆ ನೀರಿನಿಂದ ರಕ್ಷಣೆಗಾಗಿ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಛತ್ರಿ ಹಿಡಿದ ಕಂಡೆಕ್ಟರ್ ವಿಡಿಯೋ ವೈರಲ್!
ಸಾಮಾನ್ಯವಾಗಿ ಬಸ್ ಗಳ ಕಿಟಕಿ ಗಾಜುಗಳು ಹೊಡೆದು ಮಳೆ ಬರುವ ಸಮಯದಲ್ಲಿ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದು ಸರ್ವೇ ಸಾಮಾನ್ಯ...
ಹುಬ್ಬಳ್ಳಿ: ಸಾಮಾನ್ಯವಾಗಿ ಬಸ್ ಗಳ ಕಿಟಕಿ ಗಾಜುಗಳು ಹೊಡೆದು ಮಳೆ ಬರುವ ಸಮಯದಲ್ಲಿ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದು ಸರ್ವೇ ಸಾಮಾನ್ಯ.
ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಬಸ್ ಮಾಳಿಗೆಯಿಂದ ಮಳೆ ಸುರಿಯುತ್ತಿದ್ದರಿಂದ ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಂಡೆಕ್ಟರ್ ತನ್ನ ತಲೆ ಮೇಲೆ ಬಟ್ಟೆಯನ್ನು ಹಾಕಿಕೊಂಡು ಚಾಲಕನಿಗೆ ಛತ್ರಿ ಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಹುಬ್ಬಳಿಯ ಅನ್ನಾಪುರಕ್ಕೆ ತೆರಳುವ ಬಸ್ ನಲ್ಲಿ ಈ ಅವ್ಯವಸ್ಥೆ ಎದುರಾಗಿದೆ. ಮಳೆ ಬರುತ್ತಿದ್ದರಿಂದ ಬಸ್ ಚಾಲಕನಿಗೆ ಹಿಂಬದಿಯಿಂದ ಮಳೆ ನೀರು ಬೀಳುತ್ತಿದ್ದರಿಂದ ಬಸ್ ಓಡಿಸಲು ಕಷ್ಟವಾಗುತ್ತಿದ್ದು ಇದರಿಂದಾಗಿ ಕಂಡೆಕ್ಟರ್ ಚಾಲಕನಿಗೆ ಮಳೆ ನೀರು ಬೀಳದಂತೆ ಛತ್ರಿ ಹಿಡಿದಿದ್ದಾರೆ. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಓಡಿಸಲಾಗಿರುವ ಹಳೆಯ ಬಸ್ ಗಳನ್ನು ನಂತರ ಇತರ ತಾಲೂಕುಗಳಲ್ಲಿ ಓಡಿಸಲು ನೀಡಲಾಗುತ್ತದೆ.