ರಾಜ್ಯ

ಗರಿಷ್ಠ ಮಟ್ಟ ತಲುಪಿದ ಭದ್ರ ಜಲಾಶಯ: ರೈತರ ಮೊಗದಲ್ಲಿ ಮಂದಹಾಸ!

Shilpa D
ಶಿವಮೊಗ್ಗ: ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ ನೀರು ಸ್ವೀಕರಿಸಿದೆ.
ಜಲಾಶಯದ 186 ಅಡಿ ಗರಿಷ್ಠ ನೀರಿನ ಮಟ್ಟವಿದ್ದು, 136 ಅಡಿ ಸಾಮರ್ಥ್ಯ ಹೊಂದಿದೆ. 1971,77, 1991, 1992 ಮತ್ತು 1997 ರಲ್ಲಿ ಜಲಾಶಯ ಗರಿಷ್ಠ ನೀರಿನ ಮಟ್ಟ ತಲುಪಿತ್ತು.
ಜಲಾಶಯದ ನೀರು  ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕೃಷಿ ಸಮುದಾಯದ ಬೇಡಿಗೆ ಹಾಗೂ ನಂಬಿಕೆಗಳು ಹೆಚ್ಚಿವೆ, ಭತ್ತದ ಬೆಳೆಗೆ ಕೂಡಲೇ ನೀರು ಬಿಡುವಂತೆ ದಾವಣಗೆರೆ ಜಿಲ್ಲಾ ರೈತರು ಭದ್ರಾ ಕಮಾಂಡ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯಿಸಿದೆ.
ಜೂನ್ 4ರ ವೇಳೆಗೆ 112. 80 ಅಡಿ ಇದ್ದ ನೀರಿನ ಮಟ್ಟ ಜೂನ್ 15ರ ವೇಳೆಗೆ 134.20 ಅಡಿಗೆ ಏರಿದೆ. ಕೊಪ್ಪ,.ಎನ್ ಆರ್ ಪುರ ಮತ್ತು ಶೃಂಗೇರಿಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ 22 ಅಡಿ ನೀರು ಜಲಾಶಯ ಸೇರಿದೆ.
SCROLL FOR NEXT