ಬೆಂಗಳೂರು: ಮಕ್ಕಳೊಡನೆ ತಾಯಿ ಆತ್ಮಹತ್ಯೆಗೆ ಯತ್ನ, ವರ್ಷದ ಮಗು ಸಾವು
ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದೊಡನೆ ತಾಯಿ ತನ್ನಿಬ್ಬರು ಮಕ್ಕಳೊಡನೆ ಕೆರೆಗೆ ಹಾರಿದ್ದು ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗು ಪಾರಾಗಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ಬೆಂಗಳೂರಿನ ಹೊರವಲಯ ಜಿಗಣಿ ಸಮೀಪದಲ್ಲಿ ನಡೆದಿದೆ.
ಜಿಗಣಿ ಪೋಲೀಸ್ ಠಾಣೆ ವ್ಯಾಪ್ತಿಯ ಆನೆಕಲ್ ತಾಲೂಕಿನಲ್ಲಿ ಮಂಗಳವಾರ ಸಂಜೆ ಈ ದುರಂತ ಸಂಭವಿಸಿದೆ.ಘಟನೆಯಲ್ಲಿ ಮೋಹಿತ್ (1) ಸಾವನ್ನಪ್ಪಿದ್ದರೆ ಮುನಿರತ್ನಾ (25) ಹಾಗೂ ನಿತ್ಯಾ (3) ಅವರನ್ನು ಗ್ರಾಮಸ್ಥರು ರಕ್ಷಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದು "ಜಿಗಣಿ ನಿವಾಸಿಯಾದ ಮುನಿರತ್ನಾ ತನ್ನ ಮಕ್ಕಳಾದ ಮೋಹಿತ್ ಹಾಗು ನಿತ್ಯಾ ಜತೆ ಮಂಗಳವಾರ 6 ಗಂಟೆ ಸುಮಾರಿಗೆ ಮಹಂತ ಲಿಂಗಪುರ ಕೆರೆಗೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮಾರ್ಗದಲ್ಲಿ ಸಂಚರಿಸುತ್ತಿದ್ದ ಗ್ರಾಮಸ್ಥರು ಮೂವರು ನೀರಲ್ಲಿ ಮುಳುಗುವುದನ್ನು ಕಂಡು ಕೆಲವರು ನೀರಿಗೆ ಹಾರಿ ಜೀವ ರಕ್ಷಣೆಗೆ ಮುಂದಾಗಿದ್ದಾರೆ.ಅವರು ತಾಯಿ ಮತ್ತು ಮಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು, ಆದರೆ ಒಂದು ವರ್ಷದ ಮಗು ಮೋಹಿತ್ ಸಾವನ್ನಪ್ಪಿದೆ" ಪೋಲೀಸರು ಮಾಹಿತಿ ನಿಡಿದ್ದಾರೆ.
ಜಿಗಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.