ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಕುಮಾರಸ್ವಾಮಿ ಸಭೆ
ಬೆಂಗಳೂರು: ಕರ್ನಾಟಕ ಪೋಲೀಸ್ ಎಂದರೆ ರಾಷ್ಟ್ರದಾದ್ಯಂತ ಇದ್ದ ಗೌರವ ಇಂದು ಉಳಿದಿಲ್ಲ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲೀಸರ ಮರ್ಯಾದೆ ಹರಾಜಾಗಿದೆ. ಇನ್ನಾದರೂ ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಪೋಲೀಸರಿಗೆ ಸೂಚಿಸಿದ್ದಾರೆ.
ಶುಕ್ರವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಕಛೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಐಜಿಪಿ ರಾಮಚಂದ್ರರಾವ್ ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿಎಉವ ಸಮ್ಮಿಶ್ರ ಸರ್ಕಾರದ ಕಾರಣ ಪೋಲೀಸರ ಮೇಲೆ ಒತ್ತಡ ಬರುವ ಸಾಧ್ಯತೆ ಇದೆ, ನೀವು ಜಾಗೃತರಾಗಿರಬೇಕು. ಯಾವ ಒತ್ತಡಕ್ಕೆ ಮಣಿಯಬೇಡಿ.ದಕ್ಷತೆಯಿಂದ ಕರ್ತವ್ಯ ಪಾಲನೆ ನಡೆಸಿ ಎಂದ ಕುಮಾರಸ್ವಾಮಿಒ ಕಾನೂನು ಸುವ್ಯವಸ್ಥೆ ಸೂಕ್ತವಾಗಿದ್ದು ರಾಜ್ಯದಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂದರು.
ಹೊಸ ಸರ್ಕಾರದ ಮೇಲೆ ಗೌರವ ಬರುವಂತೆ ಪೋಲೀಸರು ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನಿಡಿದ್ದಾರೆ.
2018ರಲ್ಲಿ ಆಗಬಹುದಾದ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರ, 2016, 2017, 2018 ರ ರೌಡಿ ಚಟುವಟಿಕೆಗಳು ಮತ್ತು ಕೋಮು ಸಂಘರ್ಷದ ತನಿಖೆ ವಿವರ, ಸರಗಳ್ಳತನ ಸೇರಿ ಇತರೆ ಅಪರಾಧಿಗಳಿಗೆ ಎಷ್ಟರ ಮಟ್ಟಿಗೆ ಶಿಕ್ಷೆ ಆಗಿದೆ? ಎಂಬೆಲ್ಲಾ ಮುಖ್ಯ ವಿಚಾರ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ.
ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನ ಪ್ರಭಾ, ಡಿಜಿ & ಐಜಿಪಿ ನೀಲಮಣಿ ರಾಜು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿ ಹಿರಿಯ ಪೋಲೀಸ್ ಅಧಿಕಾರುಗಳು ಸಭೆಯಲ್ಲಿ ಹಾಜರಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶೇಷ ಕೆಎಸ್ಪಿ ಆ್ಯಪ್ ಅನ್ನು ಬಿಡುಗಡೆಗೊಳಿಸಿದ್ದಾರೆ.