ಮೈಸೂರು: ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಮೂವರು ಸಾವು 
ರಾಜ್ಯ

ಮೈಸೂರು: ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಮೂವರು ಸಾವು

ಖಾಸಗಿ ಬಸ್ ಹಾಗೂ ಗೂಡ್ಸ್ ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ......

ಮೈಸೂರು: ಖಾಸಗಿ ಬಸ್ ಹಾಗೂ ಗೂಡ್ಸ್ ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಮೂಗೂರು ಗ್ರಾಮದಲ್ಲಿ ನಡೆದಿದೆ.
ಶಿವಮ್ಮ ((70),  ರತ್ನಮ್ಮ (50) ಹಾಗೂ ರಿಕ್ಷಾ ಚಾಲಕ  ಮಹಾದೇವ ಸ್ವಾಮಿ ಅಲಿಯಾಸ್ ಸುರೇಶ್ (24)  ಮೃತ ದುರ್ದೈವಿಗಳಾಗಿದ್ದು ಇವರೆಲ್ಲರೂ ಚಾಮರಾಜನಗರ ಜಿಲ್ಲೆ ಹಾನಪುರ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ.
ಹಾನಪುರದ ಅನ್ನಪೂರ್ಣ ಮತ್ತು ಶಂಕರ್, ಚೆನ್ನೇನನಿಂಗನಹಳ್ಳಿಯ ಬೃಂದಾ ಹಾಗೂ ಕಮಲಮ್ಮ, ನಿಂಗನಾಪುರ ಗ್ರಾಮದ ನಂದಿನಿ ಮತ್ತು ಚೇತನ್. ಗಾಯಗೊಂಡಿದ್ದಾರೆ.
ಶಿವಮ್ಮ ಹಾಗೂ ಆಟೋ ಚಾಲಕ ಸ್ವಾಮಿ ಸ್ಥಳದಲ್ಲಿ ಸಾವನ್ನಪ್ಪಿದ್ದರೆ ರತ್ನಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾಪುರದ ಮಹಾದೇವ ಸ್ವಾಮಿ ಅಲಿಯಾಸ್ ರವಿ ಅವರ ಸಂಬಂಧಿಗಳು ಆಟೋದಲ್ಲಿ ನಂಜನಗೂಡಿಗೆ ತೆರಳುತ್ತಿದ್ದರು. ಆಟೋ ಮೂಗೂರು ಗ್ರಾಮದತ್ತ ಧಾವಿಸುತ್ತಿದ್ದಾಗ ಬಿ.ಆರ್. ಹಿಲ್ಸ್ ಕಡೆಯಿಂದ ಟಿ. ನರಸಿಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆ ಕುರಿತಂತೆ ಟಿ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

SCROLL FOR NEXT