ರಾಜ್ಯ

ಕಾರ್ಯಕ್ರಮದ ಅತಿಥಿಗಳ ಪಟ್ಟಿಯಿಂದ ರಾಜ್ಯಪಾಲರ ಹೆಸರನ್ನೇ ಕೈಬಿಟ್ಟ ಬೆಂಗಳೂರು ಕೇಂದ್ರ ವಿವಿ!

Srinivas Rao BV
ಬೆಂಗಳೂರು: ಮಾ.7 ರಂದು ವಿಶ್ವವಿದ್ಯಾನಿಲಯದ ಔಪಚಾರಿಕ ಕಾರ್ಯಕ್ರಮದ
ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಬೆಂಗಳೂರು ಕೇಂದ್ರ ವಿವಿ ಕಾರ್ಯಕ್ರಮದ ಅತಿಥಿಗಳ ಪಟ್ಟಿಯಿಂದ ರಾಜ್ಯಪಾಲರ ಹೆಸರನ್ನೇ ಕೈಬಿಟ್ಟಿದೆ. 
ರಾಜ್ಯಪಾಲರು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿರುತ್ತಾರೆ. ಹೀಗಿದ್ದರೂ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಮುದ್ರಣಗೊಂಡಿರುವ ಆಹ್ವಾನ ಪತ್ರಿಕೆಯಲ್ಲಿ ರಾಜ್ಯಪಾಲರ ಹೆಸರನ್ನೇ ಮರೆಯಲಾಗಿದೆ. ಮಾ.07 ರಂದು ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸತ್ ಸದಸ್ಯರು, ರಾಜ್ಯಸಭಾ ಸದಸ್ಯರು, ರಾಜ್ಯ ಸಚಿವರು, ಎಂಎಲ್ ಸಿ ಗಳು, ಬೆಂಗಳೂರು ಮೇಯರ್, ಅಧಿಕಾರಿಗಳು ಹಾಗೂ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 
ರಾಜ್ಯಪಾಲರ ಹೆಸರನ್ನು ಕೈಬಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಉಪಕುಲಪತಿಗಳನ್ನು ಪ್ರಶ್ನಿಸಿದರೆ ಇದು ಅರೆ-ರಾಜಕೀಯ ಮತ್ತು ಅರೆ ಶೈಕ್ಷಣಿಕ ಕಾರ್ಯಕ್ರಮವಾಗಿದ್ದು, ಕೇವಲ 15 ದಿನಗಳ ಹಿಂದಷ್ಟೇ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ದಿನಾಂಕ ನಿಗದಿಪಡಿಸಲಾಯಿತು. ಆದರೆ ರಾಜ್ಯಪಾಲರನ್ನು ಆಹ್ವಾನಿಸಬೇಕೆಂದರೆ ದಿನಾಂಕ ವ್ಯತ್ಯಯವಾಗುತ್ತಿತ್ತು. ರಾಜ್ಯಪಾಲರನ್ನು ಕರೆಸುವುದೆಂದರೆ ಹಲವಾರು ಪ್ರಕ್ರಿಯೆಗಳಿರುತ್ತವೆ, ಈ ಹಿಂದೆ ಆಹ್ವಾನವಿದ್ದರೂ ವಿವಿಯ ಹಲವು ಕಾರ್ಯಮ್ರಗಳಿಗೆ ರಾಜ್ಯಪಾಲರು ಗೈರಾಗಿರುವ ಉದಾಹರಣೆ ಇದೆ. ಆದ್ದರಿಂದ ರಾಜ್ಯಪಾಲರಿಗೆ ಆಹ್ವಾನ ನೀಡಲಾಗಿಲ್ಲ ಎಂದು ಬೆಂಗಳೂರು ವಿವಿಯ ಉಪಕುಲಪತಿ ಜಾಫೆಟ್ ಹೇಳಿದ್ದಾರೆ. 
SCROLL FOR NEXT