ರಾಜ್ಯ

2 ನಿಮಿಷದಲ್ಲಿ ಎಲ್ಲಾ ನಡೆಯಿತು: ಲೋಕಾಯುಕ್ತರ ಪ್ರಾಣ ರಕ್ಷಿಸಿ ಹೀರೋ ಆದ್ರು ಜಾಮದಾರ್!

Shilpa D
ಬೆಂಗಳೂರು: ಲೋಕಾಯುಕ್ತ  ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ತೇಜ್ ರಾಜ್ ಶರ್ಮಾ ಚಾಕು ಇರಿದ ತಕ್ಷಣವೇ ಎಲ್ಲರಿಗೂ ವಿಷಯ ತಿಳಿಸಿ ಜಾಮದಾರ್ ಎಂಬುವರು ಹೀರೋ ಆಗಿದ್ದಾರೆ.
ಜಾಮದಾರ್ ಪಳನಿ ಆರೋಪಿಯನ್ನು ಒಳಗೆ ಕೂಡಿ ಹಾಕಿ ಹೊರಗಡೆಯಿಂದ ಲಾಕ್ ಮಾಡಿ ಆರೋಪಿ ತಪ್ಪಿಸಿಕೊಂಡು ಹೋಗದಂತೆ ತಡೆ ಹಿಡಿದಿದ್ದಾರೆ.
ಪಳನಿ ಕಳೆದ 23 ವರ್ಷಗಳಿಂದ ಲೋಕಾಯುಕ್ತ  ಸಂಸ್ಥೆಯನ್ನು ಕೆಲಸ ಮಾಡುತ್ತಿದ್ದಾರೆ. 2016 ರ ಜನವರಿಯಲ್ಲಿ ನ್ಯಾಯಮೂರ್ತಿ ಪಿ,  ವಿಶ್ವನಾಥ್ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರತಿದಿನ ಅವರಿಗೆ ಸ್ವಾಗತ ಕೋರುತ್ತಿದ್ದರು, ಪ್ರತಿದಿನ ಸಂಜೆ 7 ಗಂಟೆಗೆ ಕಚೇರಿ ಕೆಲಸ ಮುಗಿಸಿ ತೆರಳುತ್ತಿದ್ದರು.
ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಬರುವ ವಿಸಿಟರ್ಸ್ ಗಳ ಚೀಟಿ ತಂದು ಕೊಡುತ್ತಿದ್ದರು. ಅವರ ಹೆಸರುಗಳನ್ನು  ಬರೆದು ಕೊಳ್ಳುತ್ತಿದ್ದರು.ನಂತರ ಆ ಚೀಟಿ ತಂದು ಲೋಕಾಯುಕ್ತರಿಗೆ ತಂದು ಕೊಟ್ಟು ಅವರು ಒಪ್ಪಿದ ನಂತರ ಭೇಟಿಗೆ ಕಳುಹಿಸುತ್ತಿದ್ದರು.
ಮಧ್ಯಾಹ್ನ ಸುಮಾರು 1.40 ರ ಸುಮಾರಿಗೆ ತೇಜ್ ರಾಜ್ ಶರ್ಮಾ ಶೆಟ್ಟಿ ಅವರನ್ನು ಭೇಟಿ ಮಾಡಲು ಬಂದಿದ್ದಾನೆ. ಆತ ಒಳಗೆ ಹೋದ ಕೆಲ ಕ್ಷಣದಲ್ಲೇ ಒಳಗಿನಿಂದ ಜೋರಾಗಿ ಕಿರುಚಿಕೊಂಡ ಶಬ್ದ ಕೇಳಿದೆ,  ಕೂಡಲೇ ಒಳಗೆ ತೆರಳಿದ ಜಾಮದಾರ್ ಶೆಟ್ಟಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಅವರನ್ನು ರಕ್ಷಿಸಲು ಜಾಮದಾರ್ ಬಂದ ತಕ್ಷಣ ಆರೋಪಿ ತನ್ನ ಕೈಯ್ಯಲ್ಲಿದ್ದ ಚಾಕುವನ್ನು ಎಸೆದ, ತಕ್ಷಣವೇ ಜಾಮದಾರ್ ಭದ್ರತಾ ಸಿಬ್ಬಂದಿಗೆ ಅಲರಾಂ ಹೊಡೆದು ತಿಳಿಸಿದ್ದಾರೆ,ಕೂಡಲೇ ರಿಜಿಸ್ಟಾರ್ ಎಚ್ ಎಂ ನಂಜುಂಡ ಸ್ವಾಮಿ, ಎಡಿಜಿಪಿ ಸಂಜಯ್ ಸಹಾಯ್ ಸಹಾಯಕ್ಕಾಗಿ ಲೋಕಾಯುಕ್ತರ ಕಚೇರಿಗೆ ಬಂದಿದ್ದಾರೆ, 
ರಕ್ತದ ಮಡುವಿನಲ್ಲಿ ಬಿದ್ದಿದ್ದ  ಶೆಟ್ಟಿ ಅವರನ್ನು ವ್ಹೀಲ್ ಚೇರ್ ನಲ್ಲಿ ಕೂರಿಸಿಕೊಂಡು ಹೊರಗೆ ಕರೆದು ತಂದಿದ್ದಾರೆ. ಜೊತೆಗೆ ಜಾಮದಾರ್ ಪಳನಿ ಆರೋಪಿಯನ್ನು ಒಳಗೆ ಕೂಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ, ಪಳನಿ ಕೇವಲ ಶೆಟ್ಟಿ ಅವರ ಜೀವವನ್ನು ಅಪಾಯದಿಂದ ಪಾರು ಮಾಡಿದ್ದಲ್ಲದೇ ಆರೋಪಿ ತಪ್ಪಿಸಿಕೊಂಡು ಹೋಗುವುದನ್ನು ತಡೆ ಹಿಡಿದಿದ್ದಾರೆ, ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. 
SCROLL FOR NEXT