ತುಮಕೂರು: ಲೋಕಾಯುಕ್ತ ಪಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಆರೋಪಿ ತೇಜ್ ರಾಜ್ ಶರ್ಮಾ ನಿವಾಸದಲ್ಲಿ ಭಾನಾಮತಿ ಕುರಿತ ಪುಸ್ತಕಗಳು ಲಭ್ಯವಾಗಿ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳು ತಿಳಿಸಿರುವಂತೆ ರಾಜಸ್ಥಾನದ ಪಾಲಿ ಜಿಲ್ಲೆಯ ಮೂಲದ ತೇಜರಾಜ್ ಶರ್ಮ ಅವರ ತಂದೆ ರೂಪಚಂದ ಶರ್ಮ 35 ವರ್ಷದ ಹಿಂದೆಯೇ ಕುಟುಂಬ ಸಮೇತ ತಿಪಟೂರಿಗೆ ಬಂದು ನೆಲೆಸಿದ್ದರು. ತೇಜರಾಜ್ 1998ರಿಂದ ಕುಟುಂಬದವರಿಂದ ದೂರವಿದ್ದ. ಅಲ್ಲದೆ, ಸಣ್ಣ, ಸಣ್ಣ ವಿಚಾರಗಳಿಗೂ ಉದ್ವೇಗಕ್ಕೊಳಗಾಗುತ್ತಿದ್ದ ತೇಜ್ ರಾಜ್ ಬೇಗ ಕೋಪಗೊಳ್ಳುತ್ತಿದ್ದ ಎನ್ನಲಾಗಿದೆ. ಖಾಸಗಿ ಪೀಠೋಪಕರಣ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ತೇಜ್ ರಾಜ್ ಬಳಿಕ ಕೆಲಸ ತೊರೆದಿದ್ದ. ಬಳಿಕ ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣ ಸಪ್ಲೈ ಮಾಡುವ ಸಬ್ ಟೆಂಡರ್ ಪಡೆಯುತ್ತಿದ್ದ. ಈಗ ಈತನ ಬಿದಿರುಮಳೆ ತೋಟದ ಬಾಡಿಗೆ ರೂಂ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೇಜರಾಜ್ 1998ರಿಂದ ಕುಟುಂಬದವರಿಂದ ದೂರವಿದ್ದನಂತೆ. ತೇಜ್ ರಾಜ್ ಗೆ ಇಬ್ಬರು ಸಹೋದರರಿದ್ದು, ಹಿರಿಯ ಸಹೋದರ ಜಗದೀಶ್ ಶರ್ಮಾ ಟೂರ್ಸ್ ಅಂಡ್ ಟ್ರಾವಲ್ ಸಂಸ್ಥೆಯ ಏಜೆಂಟ್ ಆಗಿದ್ದು, ಮತ್ತೋರ್ವ ಹೋದರ ಪುರುಷೋತ್ತಮ್ ಶರ್ಮಾ ತುಮಕೂರಿನ ಎಂಜಿ ರಸ್ತೆಯಲ್ಲಿ ಬ್ಯಾಗ್ ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಹೋದರರು ತಿಳಿಸಿರುವಂತೆ ತೇಜ್ ರಾಜ್ ಶರ್ಮಾ ಶಾರ್ಟ್ ಟೆಂಪರ್ ಆಗಿದ್ದು, ಸಣ್ಣ ಪುಟ್ಟ ವಿಚಾರಗಳಿಗೂ ಕೋಪ ಮಾಡಿಕೊಳ್ಳುತ್ತಿದ್ದನಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಆಗಾಗ ಮನೆಗೆ ಬರುತ್ತಿದ್ದ ತೇಜ್ ರಾಜ್ ಟೀ ಕುಡಿದ ಬಳಿಕ ಹೊರಟುಹೋಗುತ್ತಿದ್ದನಂತೆ. ಸ್ಥಳೀಯ ಅಧಿಕಾರಿ ಮಂದುನಾಥ್ ಎಂಬುವವರ ವಿರುದ್ಧ ದೂರು ನೀಡಿದ್ದ ತೇಜ್ ರಾಜ್ ಶರ್ಮಾ ವರ್ಷಗಳಿಂದಲೂ ಲೋಕಾಯುಕ್ತ ಕಚೇರಿಗೆ ಅಲೆದಾಡುತ್ತಿದ್ದನಂತೆ. ಅಧಿಕಾರಿಗಳು ಕಮೀಷನ್ಗಾಗಿ ಇಲಾಖೆಗಳಿಗೆ 4-5 ಕೋಟಿ ರೂ. ನಷ್ಟ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ, ಕೈ ಕೆಲಸಗಾರರಿಗೆ, ರೇಷ್ಮೆ ರೈತರಿಗೆ, ಹಾಲು ಉತ್ಪಾದಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ದೂರಿನಲ್ಲಿ ತೇಜರಾಜ್ ಆರೋಪಿಸಿದ್ದ.
ವರ್ಷಗಳ ಹಿಂದಷ್ಟೇ ಭಗತ್ ಕ್ರಾಂತಿ ಸೇನೆ ಸೇರಿದ್ದ ತೇಜ್ ಪ್ರತಾಪ್ ತನಗೆ ತಾನೇ ವ್ಯವಸ್ಥೆ ಸರಿಯಲ್ಲ ಎಂದು ದೂರಿಕೊಳ್ಳುತ್ತಿದ್ದನಂತೆ. ವ್ಯವಸ್ಥೆಯಿಂದ ಸರಿಯಾದ ಕೆಲಸಗಳು ಆಗುತ್ತಿರಲಿಲ್ಲ ಎಂದು ದೂರುತ್ತಿದ್ದ ತೇಜ್ ರಾಜ್ ಶರ್ಮಾ ಇದೇ ಕೋಪದಲ್ಲಿ ನ್ಯಾಯಮೂರ್ತಿಗಳಿಗೆ ಚಾಕು ಇರಿದಿರಬಹುದು ಎಂದು ಅವರ ಸಹೋದರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಅಧಿಕಾರಿಗಳು ನೀಡಿರುವ ಮಾಹಿತಿಯನವ್ವಯ ಭ್ರಷ್ಟರ ಮೇಲೆ ದಾಳಿ ಮಾಡುತ್ತಿದ್ದ ಲೋಕಾಯುಕ್ತ ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟಿದ್ದ ತೇಜ್ ರಾಜ್ ಅದೇ ಭರವಸೆಯಲ್ಲೇ ಲೋಕಾಯುಕ್ತರಿಗೆ ದೂರು ನೀಡಿದ್ದ. ಆದರೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಲೋಕಾಯುಕ್ತರು ಸಾಕ್ಷಿ ನಿರಾಕರಿಸಿದ್ದರು. ಇದರಿಂದ ಆಕ್ರೋಶ ಭರಿತನಾಗಿ ವೈದ್ಯರಿಗೆ ಚಾಕು ಇರಿದಿದ್ದಾನೆ.
ಬುಧವಾರ ಲಕ್ಕಿದಿನ ಎಂದು ಭಾವಿಸಿದ್ದ
ಇನ್ನು ತನ್ನ ಕೃತ್ಯಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದ ತೇಜ್ ರಾಜ್, ಭವಿಷ್ಯ, ಜ್ಯೋತಿಷ್ಯ ಅಪಾರ ನಂಬಿಕೆ ಇಟ್ಟಿದ್ದ ತೇಜ್ ರಾಜ್ ಶರ್ಮಾ, ಬುಧವಾರ ತನಗೆ ಅದೃಷ್ಟದ ದಿನ ಎಂದು ಭಾವಿಸಿದ್ದನಂತೆ. ಹೀಗಾಗಿ ತನ್ನ ಕೃತ್ಯಕ್ಕೆ ಬುಧವಾರದಂದೇ ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಲೋಕಾಯುಕ್ತ ಕಚೇರಿಗೆ ಆಗಮಿಸುವಾಗ ಪ್ಯಾಂಟ್ ಜೇಬಿನಲ್ಲಿ ಚಾಕು ತಂದಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos