ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು ನಗರದಲ್ಲಿನ ಮಹಿಳೆಯರಿಗೆ ಸುರಕ್ಷತೆ ಹೆಚ್ಚಿಸಲು ಸೂಕ್ಷ್ಮ ಸಿಸಿಟಿವಿ ಅಳವಡಿಕೆ

ಐಟಿ ನಗರ ಬೆಂಗಳೂರಿನ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ 10 ಸಾವಿರ ಸೂಕ್ಷ್ಮ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಬೆಂಗಳೂರು: ಐಟಿ ನಗರ  ಬೆಂಗಳೂರಿನ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ   10 ಸಾವಿರ ಸೂಕ್ಷ್ಮ ಸಿಸಿಟಿವಿ ಕ್ಯಾಮರಾಗಳನ್ನು  ಅಳವಡಿಸಲಾಗುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ ನಿರ್ಭಯ ನಿಧಿಯಡಿ ಬೆಂಗಳೂರಿಗೆ  667 ಕೋಟಿ ರೂ ಹಣ ಮಂಜೂರು ಮಾಡಿದೆ.

ಮಹಿಳೆಯರಿಗೆ ರಕ್ಷಣೆ ಒದಗಿಸುವ ಸೇಪ್ ಸಿಟಿ ಯೋಜನೆಯಡಿ ಬೆಂಗಳೂರು, ದೆಹಲಿ, ಕಲ್ಕತ್ತಾ , ಮುಂಬೈ, ಚೆನ್ನೈ, ಹೈದ್ರಾಬಾದ್, ಲಖನೌ , ಅಹಮದಾಬಾದ್ ನಗರಗಳು ಆಯ್ಕೆಯಾಗಿವೆ.

ಸುರಕ್ಷಾ ಮಿತ್ರಾ ಸಂಸ್ಥೆ ಪ್ರಕಾರ, ಬೆಂಗಳೂರಿನ 4,522 ವೃತ್ತಗಳಲ್ಲಿ 10 ಸಾವಿರ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, 2, 714 ಕಿಲೋ ಮೀಟರ್ ಅಂತರವನ್ನು ಸೆರೆ ಹಿಡಿಯಲಿದೆ . ಸೂಕ್ಷ್ಮ ಕ್ಯಾಮರಾಗಳಿಂದ ಸಾರ್ವಜನಿಕರ ಚಲನವಲನವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ನಿಗದಿತ ಅವಧಿಯಲ್ಲಿ ಬೀದಿಯಲ್ಲಿ ಸಂಚರಿಸಿದ ಸಾರ್ವಜನಿಕರ ಬಗ್ಗೆ ಈ ಕ್ಯಾಮರಾಗಳು ಮಾಹಿತಿ ನೀಡಲಿವೆ. ಒಂದುವೇಳೆ ಅಗತ್ಯಕ್ಕಿಂತ ಹೆಚ್ಚಿನ ಮಂದಿ ಸಂಚರಿಸಿದರೆ ಕೂಡಲೇ ಮಾಹಿತಿ ರವಾನಿಸಲಾಗಿದೆ  ಎಂದು ಬಿಬಿಎಂಪಿ ತನ್ನ ಪ್ರಸ್ತಾವದಲ್ಲಿ ತಿಳಿಸಿದೆ.

ಸಾರ್ವಜನಿಕ ಸ್ಥಳಗಳು, ಎನ್ ಜಿ ಒ ಸ್ವಯಂಸೇವಕ ಸ್ಥಳಗಳು, ಪೊಲೀಸ್ ಠಾಣೆಗಳಲ್ಲಿ ಮಹಿಳಾ ನೆರವು ವಿಭಾಗ, ಮಹಿಳೆಯರೇ ಹೆಚ್ಚಾಗಿರುವ ಆಸ್ಪತ್ರೆಗಳು, ಮಹಿಳಾ ಪೊಲೀಸ್ ಠಾಣೆ ಮತ್ತಿತರ ಕಡೆಗಳಲ್ಲೂ ಅಳವಡಿಸುವ ಬಗ್ಗೆ ಶಿಫಾರಸ್ಸು ಬಂದಿದೆ. ಮಹಿಳೆಯರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಮತ್ತಿತರ ಕ್ರಮಗಳನ್ನು ಕೈಗೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮೂರು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಶೇ. 60 ಹಾಗೂ ರಾಜ್ಯಸರ್ಕಾರ ಶೇ.40ರ ವೆಚ್ಚದಲ್ಲಿ ಈ ಯೋಜನೆ ಅನುಮೋದನೆಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. 2017 ರಲ್ಲಿ 133 ಅತ್ಯಾಚಾರ, 976 ಲೈಂಗಿಕ ಕಿರುಕುಳ ಸೇರಿದಂತೆ 2.623 . 2016ರಲ್ಲಿ 2,345 ಹಾಗೂ 2015ರಲ್ಲಿ 2.370 ಅಪರಾಧ ಪ್ರಕರಣಗಳು ವರದಿಯಾಗಿದ್ದವು



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT