ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಹೋಲುವ ವ್ಯಕ್ತಿ 
ರಾಜ್ಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಹೋಲುವ ವ್ಯಕ್ತಿ!

ನೋಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ...

ಮೈಸೂರು: ನೋಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ. 
ಬೂದು ಬಣ್ಣದ ಕೂದಲು, ಮೈಬಣ್ಣ, ಚಿನ್ನದ ಬಣ್ಣದ ಕನ್ನಡಕ, ಬಿಳಿ ಬಣ್ಣದ ಧೋತಿ ಮತ್ತು ತುಂಬು ತೋಳಿದ ಶರ್ಟ್ ಅದರ ಮೇಲೆ ಸಿದ್ದರಾಮಯ್ಯ ಹಾಕಿಕೊಳ್ಳುವ ರೀತಿಯಲ್ಲಿಯೇ ಟವಲ್ ಹಾಕಿಕೊಂಡಿರುವ ಈ ವ್ಯಕ್ತಿಯನ್ನು ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ನೋಡುತ್ತಿದ್ದೇವೆಂದು ಭಾಸವಾಗುತ್ತದೆ. 
ಪ್ರಸ್ತುತ ಈ ಸಿದ್ದರಾಮಯ್ಯ ಅವರಂತೆ ಕಾಣುವ ಈ ವ್ಯಕ್ತಿ ಮಾಡಿರುವ ಡ್ಯಾನ್ಸ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಸಿದ್ದರಾಮಯ್ಯ ಅವರಂತೆ ಕಾಣುವ ಈ ವ್ಯಕ್ತಿಯ ಹೆಸರು ಚನ್ನಮಾಯಿ ಗೌಡ (55) ಮೂಲತಃ ಇವರೂ ಕೂಡ ಮೈಸೂರಿನವರೇ ಆಗಿದ್ದು, ಟಿ.ನರಸಿಪುರ ತಾಲೂಕಿನ ಮಕನಹಳ್ಳಿ ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ ಚನ್ನಮಾಯಿ ಗೌಡ ಅವರು ರೈತರಲಾಗಿದ್ದಾರೆ. ಚನ್ನಮಾಯಿ ಅವರನ್ನು ಅವರ ಸಂಬಂಧಿಕರು ಹಾಗೂ ಸ್ನೇಹಿತರು ಜೂನಿಯರ್ ಸಿದ್ದರಾಮಯ್ಯ ಎಂದೇ ಕರೆಯುತ್ತಾರಂತೆ. 
ಕೊಡಿಗೆಹಳ್ಳಿಯಲ್ಲಿ ಮಾ.6 ರಂದು ಸಿರಿಧಾನ್ಯ ಬೆಳೆಗಾರರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿನ್ನಮಾಯಿ ಅವರು, ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು... ಅಲ್ಲಾಡ್ಸು... ಅಲ್ಲಾಡ್ಸು ಎಂಬ  ಹಾಡಿಗೆ ನೃತ್ಯ ಮಾಡಿದ್ದರು. ಈ ನೃತ್ಯ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಡುತ್ತಿದ್ದಾರೆಂಬಂತೆ ಕಾಣಿಸತೊಡಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರೇ ಡ್ಯಾನ್ಸ್ ಮಾಡುತ್ತಿದ್ದಾರೆಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದೆ. 
ಈ ವಿಡಿಯೋವಿಗೆ ಕೆಲವರು ಸಿದ್ದರಾಮಯ್ಯ ಅವರು ಎನರ್ಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ.
ಇನ್ನು ಚನ್ನಮಾಯಿ ಗೌಡ ಅವರು ಸಾಮಾಜಿಕ ಜಾಲತಾಣಗಳ ಯಾವುದೇ ತಾಣಗಳನ್ನೂ ಬಳಕೆ ಮಾಡದಿರುವುದರಿಂದ ಈ ವಿಚಾರದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಅವರ ಗ್ರಾಮದಲ್ಲಿರುವ ವ್ಯಕ್ತಿಯೊಬ್ಬರು ಸಿದ್ದರಾಮಯ್ಯ ಅವರಿಗೆ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಮುಂದೆ ಸಮಯ್ಯೆಗಳೇನಾದರೂ ಎದುರಾಗಬಹುದು ಎಂದು ಚಿನ್ನಮಾಯಿ ಗೌಡ ಅವರ ಪತ್ನಿ ಆತಂಕ ವ್ಯಕ್ತಪಡಿಸಲು ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!