ಬೆಂಗಳೂರು: ಅಲ್ಪಸಂಖ್ಯಾತ ಮಹಿಳೆಯೊಬ್ಬರಿಗೆ ಕರ್ನಾಟಕ ವಿಧಾನ ಪರಿಷತ್ ನಲ್ಲಿ ಡಿ ಗ್ರೂಪ್ ದರ್ಜೆಯ ನೌಕರಿ ನೀಡುವಂತೆ ರಾಜ್ಯ ಹೈಕೋರ್ಟ್ ಸಹಾಯ ಮಾಡಿದೆ.
ನ್ಯೂ ಬೈಯ್ಯಪ್ಪನಹಳ್ಳಿ ನಿವಾಸಿ ಮೋನಿಷಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಮದ್ಯಂತರ ಆದೇಶ ಹೊರಡಿಸಿದ್ದಾರೆ. 7ನೇ ತರಗತಿ ಉತ್ತೀರ್ಣರಾಗಿರುವ ಮೊನಿಷಾ ಕರ್ನಾಟಕ ವಿಧಾನ ಪರಿಷತ್ ನ ಡಿ ಗ್ರೂಪ್ ದರ್ಜೆಯ ನೌಕರಿಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಆದರೆ ಕರ್ನಾಟಕ ವಿಧಾನ ಪರಿಷತ್ ಆಕೆ ನೇಮಕಾತಿಗೆ ಅರ್ಹವಲ್ಲವೆಂದು ಹೇಳಿತ್ತು. ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ಪ್ರಕಾರ, ವಿಧಾನ ಪರಿಷತ್ ನಲ್ಲಿ ಖಾಲಿಯಿದ್ದ 8 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.ಮೋನಿಶಾ ಕೂಡ ಅರ್ಜಿ ಹಾಕಿದ್ದರು, 7 ಅಭ್ಯರ್ಥಿಗಳನ್ನು ನೇಮಕಗೊಳಿಸಿದ ಕೌನ್ಸಿಲ್, ಒಂದು ಹುದ್ದೆಯನ್ನು ಹಾಗೆಯೇ ಉಳಿಸಿತ್ತು. ವಿಚಾರಣೆಯನ್ನು ಮಾರ್ಚ್ 21 ಕ್ಕೆ ಮುಂದೂಡಲಾಗಿದೆ.
ಸಲ್ಲಿಸಿದ್ದ 3 ಸಾವಿರ ಅರ್ಜಿಗಳಲ್ಲಿ ಒಬ್ಬರೇ ಒಬ್ಬ ಅಲ್ಪ ಸಂಖ್ಯಾತ ಅಭ್ಯರ್ಥಿ ಸಲ್ಲಿಸಿದ್ದರು, 2016ರ ಜನವರಿ 1 ರಂದು ಕರ್ನಾಟಕ ವಿಧಾನ ಪರಿಷತ್ ಹೊರಡಿಸಿದ್ದ ಆದೇಶದನ್ವಯ 8 ಹುದ್ದೆಗಳಲ್ಲಿ 7 ಹುದ್ದೆಗೆ ನೇಮಿಸಿ ಉಳಿದ 1 ಹುದ್ದೆಯನ್ನು ಹಾಗೆಯೇ ಕಾಯ್ದಿರಿಸಿತ್ತು. ಆದರೆ ಮೋನಿಷಾ ಹೆಸರನ್ನು ಪರಿಗಣಿಸಿರಲಿಲ್ಲ.
ಹಿಂದುಳಿದ ವರ್ಗಗಳ ಖೋಟಾದಲ್ಲಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಸಂಬಂಧ ಪಟ್ಟ ಪ್ರಾಧಿಕಾರಗಳು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿವೆ ಎಂದು ಆರೋಪಿಸಿ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.