ರಾಜ್ಯ

ಮತ್ತೊಂದು ಅಪೂರ್ಣ ಯೋಜನೆಯನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ!

Srinivas Rao BV
ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆಗೊಳಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತೊಂದು ಅಂಥಹದ್ದೇ ಕೆಲಸ ಮಾಡಿದ್ದಾರೆ. 
ಮಾ.14 ರಂದು ಕೆಂಗೇರಿಒಯಲ್ಲಿ ದಿನಕ್ಕೆ 60 ಮಿಲಿಯನ್ ಲೀಟರ್  ತ್ಯಾಜ್ಯ ನೀರನ್ನು ಸಂಸ್ಕರಿಸುವ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಸಿಎಂ ಸಿದ್ದರಮಯ್ಯ ಉದ್ಘಾಟಿಸಿದ್ದಾರೆ.  ಇದೇ ವೇಳೆ ಕಾವೇರಿ ನೀರು ಪೂರೈಕೆಯ 5 ನೇ ಹಂತದ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದರಿಂದಾಗಿ ಪ್ರತಿ ದಿನ ನಗರಕ್ಕೆ 775 ಮಿಲಿಒಯನ್ ಲೀಟರ್ ನಷ್ಟು ನೀರು ಹೆಚ್ಚು ಪೂರೈಕೆಯಾಗಲಿದೆ. 
ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 239.01 ಕೋಟಿ ರೂ ವೆಚ್ಚದಲ್ಲಿ ಬಿಡಬ್ಲ್ಯುಎಸ್ಎಸ್ ಬಿ ಹಾಗೂ ಜಪಾನ್ ಸಂಸ್ಥೆಯ ನೆರವಿನಿಂದ ನಿರ್ಮಿಸಲಾಗುತ್ತಿದ್ದು,  ಕಾಮಗಾರಿಯ ಪ್ರಧಾನ ಟ್ರೀಟ್ಮೆಂಟ್ ಘಟಕ ಮಾತ್ರ ಪೂರ್ಣಗೊಂಡಿದ್ದು ಮಧ್ಯಮ ಸಂಸ್ಕರಣ ಘಟಕ ಶೇ.50 ರಷ್ಟೇ ಪೂರ್ಣಗೊಂಡಿದೆ. ಆದರೂ ಸಹ ಸಿದ್ದರಾಮಯ್ಯ ಇನ್ನೂ ಪೂರ್ಣಗೊಳ್ಳಬೇಕಿರುವ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. 
SCROLL FOR NEXT