ರಾಜ್ಯ

63 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ ಕರ್ನಾಟಕ ಲೋಕಾಯುಕ್ತ ಪೊಲೀಸ್

Sumana Upadhyaya

ಬೆಂಗಳೂರು: ಪ್ರಾಸಿಕ್ಯೂಷನ್ ಇಲಾಖೆ ಮತ್ತು ಸರ್ಕಾರದ ದಾವೆ ಇಲಾಖೆಯ ಮಾಜಿ ನಿರ್ದೇಶಕರು ಮತ್ತು ಆಡಳಿತಾಧಿಕಾರಿ ವಿರುದ್ಧ ಹಾಗೂ 61 ಮಂದಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ಸ್ (ಎಪಿಪಿ) ವಿರುದ್ಧ ಲೋಕಾಯುಕ್ತ ಪೊಲೀಸರು ವಿಶೇಷ ಕೋರ್ಟ್ ನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್/ ಸಹಾಯಕ ಸರ್ಕಾರಿ ಪ್ಲೀಡರ್ ಗಳ 2014ರ ಆಯ್ಕೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಪಟ್ಟಂತೆ ಈ ಆರೋಪ ಸಲ್ಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನಗುಂಡಿ ಗ್ರಾಮದ ನ್ಯಾಯವಾದಿ ಹೆಚ್.ಟಿ.ರವಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಒಟ್ಟು 63 ಮಂದಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಮಾಜಿ ನಿರ್ದೇಶಕ ಮತ್ತು ಆಡಳಿತಾಧಿಕಾರಿ ಚಂದ್ರಶೇಖರ್ ಜಿ ಹೀರೇಮಠ್ ಮತ್ತು ಪ್ರಾಸಿಕ್ಯೂಷನ್ ಮತ್ತು ಸರ್ಕಾರದ ದಾವೆ ಇಲಾಖೆಯ ಹೆಡ್ ಕ್ವಾರ್ಟರ್ಸ್ ಸಹಾಯಕ (ಇನ್ ಚಾರ್ಜ್)ನಾರಾಯಣಸ್ವಾಮಿಯವರನ್ನು ಮೊದಲ ಮತ್ತು ಎರಡನೇ ಆರೋಪಿಯನ್ನಾಗಿ ಸೂಚಿಸಿದ್ದಾರೆ.

ಉಳಿದ 61 ಮಂದಿ ಆರೋಪಿಗಳ ವಿರುದ್ಧ ಅಪ್ರಮಾಣಿಕತೆ, ಅಕ್ರಮ ವಿಧಾನ ವಿರುದ್ಧ ಆರೋಪ ದಾಖಲಿಸಲಾಗಿದೆ.

SCROLL FOR NEXT