ರಾಜ್ಯ

ಕಲಬುರಗಿಯಲ್ಲಿ ವೀರಶೈವ, ಲಿಂಗಾಯತ ಬಣದ ನಡುವೆ ಮಾರಾಮಾರಿ

Lingaraj Badiger
ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪ್ರತ್ಯೇಕ ಧರ್ಮದ ಪರ, ವಿರೋಧವಿರುವ ಲಿಂಗಾಯತ ಮತ್ತು ವೀರಶೈವ ಬಣಗಳ ನಡುವೆ ಸೋಮವಾರ ಮಾರಾಮಾರಿ ನಡೆದಿದೆ.
ಪ್ರತ್ಯೇಕ ಧರ್ಮಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಕಲಬುರಗಿಯ ವಲ್ಲಭಭಾಯ್ ಪಟೇಲ್ ಸರ್ಕಲ್ ನಲ್ಲಿ ಲಿಂಗಾಯತ ಬಣದ ಬೆಂಬಲಿಗರು ಸಂಭ್ರಮ ಆಚರಿಸುತ್ತಿದ್ದರು. ಇದೇ ವೇಳೆ ವೀರಶೈವ ಬಣದವರು ಪ್ರತಿಭಟನೆ ನಡೆಸುತ್ತಿದ್ದರು. 
ಈ ವೇಳೆ ಎರಡೂ ಬಣದ ಬೆಂಬಲಿಗರ ನಡುವೆ ಪರಸ್ಪರ ಮಾರಾಮಾರಿ ನಡೆದಿದ್ದು, ಲಿಂಗಾಯತ ಮುಖಂಡರು ವೀರಶೈವ ಮುಖಂಡ ಎಂಎಸ್ ಪಾಟೀಲ್ ಅವರನ್ನು ಥಳಿಸಿದ್ದಾರೆ.
ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದನ್ನು ವಿರೋಧಿಸಿ ವೀರಶೈವ ಬಣದವರು ಚಪ್ಪಲಿ ಹಿಡಿದು ಪ್ರತಿಭಟನೆ ನಡೆಸಿದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೆಡೆ ವಿಜಯೋತ್ಸವ
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಿಸಿ ಬಸವಾಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ.
SCROLL FOR NEXT