ಸರ್ಕಾರಿ ಶಾಲೆಗಳಲ್ಲಿ ಪೋಷಕ-ಶಿಕ್ಷಕ ಸಭೆ ಕಡ್ದಾಯ, ಮುಂದಿನ ವರ್ಷದಿಂದ ಜಾರಿ
ಬೆಂಗಳೂರು: ರಾಜ್ಯ ಸರ್ಕಾರಿ ಶಾಲೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಪೋಷಕ ಶಿಕ್ಷಕರ ಸಭೆಗಳನ್ನು (ಪಿಟಿಎಂ) ಪರಿಚಯಿಸಲು ನಿರ್ಧರಿಸಿದೆ. ಖಾಸಗಿ ಶಾಲೆಗಳನ್ನು ಮಾದರಿಯಾಗಿರಿಸಿಕೊಂಡು ಈ ರೀತಿಯ ಪೋಷಕ ಶಿಕ್ಷಕರ ಸಭೆಗಳನ್ನು ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕದ್ಡಾಯಗೊಳಿಸಲು ಇಲಾಖೆ ತೀರ್ಮಾನಿಸಿದೆ. ಶಾಲಾ ಮುಖ್ಯೋಪಾದ್ಯಾಯರು, ಮುಖ್ಯೋಪಾದ್ಯಾಯಿನಿ ತಮ್ಮ ಶಾಲೆಯಲ್ಲಿ ಮೂರು ತಿಂಗಳಿಗೊಮ್ಮೆ ಇಂತಹಾ ಸಭೆ ನಡೆಸಬೇಕು ಎಂಡು ಇಲಾಖೆ ತಿಳಿಸಿದೆ.
"ಸಭೆಗಳಿಂದ ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಅವಕಾಶವಾಗಲಿದೆ" ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ನಾನು ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪಿಟಿಎಂಗಳನ್ನು ಆಯೋಜಿಸುವುದನ್ನು ಕಡ್ಡಾಯಗೊಳಿಸಬೇಕೆಂದು ನಮ್ಮ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ಇದರಿಂಡ ಪೋಷಕರ ಮತ್ತು ಶಿಕ್ಷಕರು ಮಗುವಿನ ಬೆಳವಣಿಗೆ ಕುರಿತು ತಿಳಿಯುವುದು ಸುಲಭವಾಗಲಿದೆ" ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಟ್ ಹೇಳಿದ್ದಾರೆ.
ಸರ್ಕಾರದ ಈ ಕ್ರಮವನ್ನು ಶಿಕ್ಷಕವರ್ಗ ಸ್ವಾಗತಿಸಿದೆ. ಆದರೆ ಅವರು ಈ ಸಭೆಯಗಳ ಯಶಸ್ಸಿನ ಕುರಿತಾಗಿ ಸಂದೇಹ ವ್ಯಕ್ತಪಡಿಸುತ್ತಾರೆ. "ಸಾಮಾನ್ಯವಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುವ ಪೋಷಕರು ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಅವರು ಶ್ರಮಜೀವಿಗಳು. ದಿನದ ಬಹುಪಾಲು ಕೆಲಸಗಳಲ್ಲಿ ತೊಡಗಿರುತ್ತಾರೆ. ಹಾಗಿರುವಾಗ ನಾವು ಅವರನ್ನು ಪೋಷಕ-ಶಿಕ್ಷಕರ ಸಭೆಗಾಗಿ ಆಹ್ವಾನಿಸಿದರೆ ಅವರ ಕೆಲಸಗಳನ್ನು ಬಿಟ್ಟು ಬರಲು ಸಾಧ್ಯವಾಗಲಿದೆಯೆ? ರಾಜರಾಜೇಶ್ವರಿ ನಗರದ ಸರ್ಕಾರಿ ಮಾದ್ಯಮಿಕ ಶಾಲಾ ಶಿಕ್ಷಕರೊಬ್ಬರು ಹೇಳಿದ್ದಾರೆ.
ಮಕ್ಕಳಿಗೆ ಡೈರಿ, ಪಾಸ್ಪೆಕ್ಟಸ್ ವಿತರಣೆ
ಖಾಸಗಿ ಶಾಲಾ ವಿದ್ಯಾರ್ಥಿಗಳಂತೆಯೇ ಸರ್ಕಾರಿ ಶಾಲಾ ಮಕ್ಕಳಿಗೂ ಸಹ 2018-19ರ ಶೈಕ್ಷಣಿಕ ವರ್ಷದಿಂದ ಡೈರಿಗಳು ಮತ್ತು ಪ್ರಾಸ್ಪೆಕ್ಟಸ್ ಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಡೈರಿಗಳ ಮುದ್ರಣಕ್ಕೆ ಆದೇಶಿಸಲಾಗಿದೆ ಎಂದು ಸಚಿವ ಸೇಟ್ ಹೇಳಿದ್ದಾರೆ. ಈ ಡೈರಿಗಳು ಶಿಕ್ಷಕರು ಹಾಗೂ ಪೋಷಕರಿಗೆ ಅನುಕೂಲಕರವಾಗಲಿದೆ. ಹಾಗೆಯೇ ಯಾವುದೇ ಮಗುವಿಗೆ ರಜೆ ಅಗತ್ಯವಾದರೆ ಇದೇ ಡೈರಿಯ ಮೂಲಕ ರಜೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಸಚಿವರು ಹೇಳಿದರು.