ರಾಜ್ಯ

ಹಣಕಾಸು ಆಯೋಗದ ನಿಯಮ ಬದಲಾವಣೆಯಿಂದ ದಕ್ಷಿಣದ ಹಿತಾಸಕ್ತಿ ಮೇಲೆ ಪರಿಣಾಮ : ಸಿದ್ದರಾಮಯ್ಯ

Raghavendra Adiga
ಬೆಂಗಳೂರು: 2011ರ ಜನಗಣತಿ ದಾಖಲೆಗಳನ್ನು ಆಧರಿಸಿ 15 ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಿರುವ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
”ಈ ಕ್ರಮವು ದಕ್ಷಿಣದ ರಾಜ್ಯಗಳ ಹಿತಾಸಕ್ತಿಯನ್ನು ಪ್ರಭಾವಿಸುತ್ತದೆ’ ಫೇಸ್ ಬುಕ್ ಪೋಸ್ಟ್ ನಲ್ಲಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಸಂಪನ್ಮೂಲಗಳನ್ನು ವರ್ಗಾಯಿಸುವ ಪರಿಕಲ್ಪನೆ ಒಳ್ಳೆಯದೇ ಆದರೂ ಅಭಿವೃದ್ಧಿ ವಿಚಾರದಲ್ಲಿ ಪ್ರಾದೇಶಿಕ ಅಸಮತೋಲನ ಪರಿಹರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
"ಪ್ರಶ್ನೆ ಏನೆಂದರೆ ದಕ್ಷಿಣದ ಹೂಡಿಕೆಗಳಿಂದ ಇದನ್ನು ಅಳೆಯಬೇಕಿದೆಯೆ? ಜನಸಂಖ್ಯಾ ನಿಯಂತ್ರಣ, ಅಭಿವೃದ್ಧಿಯನ್ನು ಪ್ರೋತ್ಸಾಹಿಸಬಾರದೆ?" ಎಂದು ಕೇಳಿರುವ ಮುಖ್ಯಮಂತ್ರಿಗಳು ಈ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರವು ಹೊಸ ಚಿಂತನೆಗಳೊಡನೆ ಬರಬೇಕು ಎಂದರು.
"15 ನೇ ಹಣಕಾಸು ಆಯೋಗವು ಹೊಸ ಚಿಂತನೆಗಳನ್ನು ಒಳಗೊಂಡಿರಬೇಕು. ತೆರಿಗೆ ಸಂಗ್ರಹಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಕು. ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಕೊಚ್ಚಿ ಮುಂತಾದ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ನಗರಗಳು, ಶಿಕ್ಷಣ, ಮಹಿಳಾ ಸಬಲೀಕರಣ (ಜನಸಂಖ್ಯಾ ನಿಯಂತ್ರಣಕ್ಕೆ ಮಾದರಿ) ಈ ಅಂಶಗಳನ್ನು ಹೊಂದಿರಬೇಕು" ಅವರು ಬರೆದಿದ್ದಾರೆ.
ಕೇಂದ್ರದ ತೆರಿಗೆ ಹಣ ವಿತರಣೆಗಾಗಿ 1971 ರ ಜನಗಣತಿಯ ಬದಲಾಗಿ, 2011 ರ ಜನಗಣತಿಯ ದಾಖಲೆಗಳನ್ನು ಪರಿಗಣಿಸುವಂತೆ 15 ನೇ ಹಣಕಾಸು ಆಯೋಗಕ್ಕೆ ಕೇಂದ್ರವು ಶಿಫಾರಸು ಮಾಡಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಕೇಂದ್ರದ ತೆರಿಗೆ ಹಣವನ್ನು ರಾಜ್ಯಗಳ ನಡುವಿನ ವಿತರಣೆಗಾಗಿ ವಿಂಗಡನಾ ಅನುಪಾತವನ್ನು ಆಯೋಗ ನಿರ್ಧರಿಸುತ್ತದೆ.
SCROLL FOR NEXT