ಆರ್ಟ್ ಆಫ್ ಲಿವಿಂಗ್ ನಿಂದ ಕಾವೇರಿ ಪುನಶ್ಚೇತನ ಯೊಜನೆ ಪ್ರಾರಂಭ
ಬೆಂಗಳೂರು: ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 35 ಕ್ಕೂ ಅಧಿಕ ನದಿಗಳು ಮತ್ತು ಉಪನದಿಗಳಿಗೆ ಪುನರ್ವಸತಿ ಯೋಜನೆ ಅನುಷ್ಠಾನಗೊಳಿಉಸುವಿಕೆ ಬಳಿಕ ಆರ್ಟ್ ಆಫ್ ಲಿವಿಂಗ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ (ಆರ್ಡಿಪಿಆರ್) ಜಂಟಿಯಾಗಿ ಕೊಡಗಿನಲ್ಲಿ ಕಾವೇರಿ ಪುನಶ್ಚೇತನ ಯೋಜನೆಗೆ ಚಾಲನೆ ನೀಡಿದೆ.
ಯೋಜನೆಯ ಮೊದಲ ಹಂತದಿಂದ 10 ಗ್ರಾಮ ಪಂಚಾಯತ್ ಗಳ 1.5 ಲಕ್ಷ ಜನರಿಗೆ ಅನುಕೂಲ ಆಗಲಿದೆ.
ಮೊದಲ ಹಂತದಲ್ಲಿ ಜಿಲ್ಲೆಯಾದ್ಯಂತ 751 ನೀರಿನ ಪುನರ್ಭರ್ತಿ ವಿನ್ಯಾಸ(ರೀಚಾರ್ಜ್ ಸ್ಟ್ರಕ್ಚರ್) ಗಳನ್ನು ನಿರ್ಮಿಸಲಾಗುವುದು. ಇಸ್ರೋ, ಐಐಎಸ್ಸಿ, ಜಿಯೋಟೆಕ್ನಿಕಲ್ ಗ್ರೂಪ್ಸ್ ಮತ್ತು ಮಾಹಿತಿ ತಂತ್ರಜ್ಞಾನ ತಜ್ಞರ ತಂಡದೊಂದಿಗೆ ಆರ್ಟ್ ಆಫ್ ಲಿವಿಂಗ್ ಈ ಕಾರ್ಯದಲ್ಲಿ ತೊಡಗಲಿದೆ.
ಧ್ಯಾನ, ಕೌಶಲ್ಯ ಅಭಿವೃದ್ಧಿ ಮತ್ತು ನಾಯಕತ್ವ ತರಬೇತಿಗಳಂತಹಾ ಕಾರ್ಯಕ್ರಮದ ಮುಖೇನ ಜನರಲ್ಲಿ ಸ್ವಸಾಮರ್ಥ್ಯ ನಿರ್ಮಾಣದ ಕೆಲಸವನ್ನು ಇದು ನಿರ್ವಹಿಸಲಿದೆ ಜತೆಗೆ ಯೋಜನೆಗಾಗಿ ಮೂಲಭೂತ ಸೌಕರ್ಯವನ್ನು ಒದಗಿಸಲಿದೆ.
ತಮಿಳುನಾಡು, .ಕರ್ನಾಟಕದ ಬಹುಪಾಲು ಜಿಲ್ಲೆಗಳು ಕೃಷಿ ಹಾಗೂ ನಿತ್ಯ ಬಳಕೆಗಾಗಿ ಕಾವೇರಿ ನೀರನ್ನು ಅವಲಂಬಿಸಿವೆ, ಕಾವೇರಿ ನದಿಯಿಂದ ಬೆಂಗಳೂರಿಗೆ ಹೆಚ್ಚಿನ ನೀರು ಸರಬರಾಜು ಸಿಗುತ್ತಿದೆ. ಈ ಯೋಜನೆ ಅನುಷ್ಠಾನವು ಎರಡೂ ರಾಜ್ಯಗಳಿಗೆ ಸಾಕಷ್ಟು ಹೆಚ್ಚಿನ ಪ್ರಮಾಣದ ನೀರು ಲಭ್ಯವಾಗುವಂತೆ ಮಾಡುತ್ತದೆ ಎಂದು ಯೋಜನಾ ನಿರ್ದೇಶಕರು ಭರವಸೆ ಹೊಂದಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಸಂಥಾಪಕರಾದ ಶ್ರೀ ಶ್ರೀ ರವಿಶಂಕರ್ ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ನದಿ ಮುಖಜಭೂಮಿಯ ರಕ್ಷಣೆಗೆ ಒತ್ತು ನೀಡುವಂತೆ ಸ್ಥಳೀಯರಿಗೆ ಸಲಹೆ ನೀಡಿದರು.ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಶಾಸಕ ಕೆ.ಜೆ. ಬೋಪಯ್ಯ ಹಾಜರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos