ರಾಜ್ಯ

ಹನುಮ ಜಯಂತಿ ಶುಭಾಶಯ ಕೋರಿ ಸಿಎಂ ಸಿದ್ದರಾಮಯ್ಯ ಟ್ವೀಟ್, ಟ್ರಾಲ್ ಮಾಡಿದ ಬಿಜೆಪಿ

Srinivasamurthy VN
ಬೆಂಗಳೂರು: ಹನುಮ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವಿಟರ್ ಮೂಲಕ ನಾಡಿನ ಜನತೆಗೆ ಶುಭಾಶಯ ಕೋರಿದ್ದು, ಸಿಎಂ ಟ್ವೀಟ್ ಗೆ ವ್ಯಂಗ್ಯವಾಡಿರುವ ಬಿಜೆಪಿ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದಿದ್ದೀರಿ ಎಂದು ಕಿಡಿಕಾರಿದೆ.
ಇಂದು ಹನುಮ ಜಂಯತಿ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರು ಟ್ವಿಟರ್ ನಲ್ಲಿ ನಾಡಿನ ಜನತೆಗೆ ಶುಭ ಕೋರಿದ್ದು, ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಷ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 
ಈ ಟ್ವೀಟ್ ಗೆ ವ್ಯಂಗ್ಯವಾಡಿರುವ ಬಿಜೆಪಿ, ಹನುಮ ಜಯಂತಿಗೆ ಶುಭಾಶಯ ಕೋರಿದ ಮುಖ್ಯಮಂತ್ರಿಗಳಿಗೆ ಬಿಜೆಪಿ ಟಾಂಗ್ ನೀಡಿದೆ. 'ಟ್ವಿಟರ್‌ನಲ್ಲಿ ಶುಭಾಶಯ ಕೋರುವುದು ಹಾಗಿರಲಿ ಸರ್. ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು, ಈಗ ಮಾತ್ರ ಟ್ವಿಟರ್‌ನಲ್ಲಿ ಶುಭಾಶಯ ಕೋರುತ್ತೀರಲ್ಲ, ಏನು ಅನ್ನಿಸೋದಿಲ್ಲವಾ?.... ಎಂದು ಬಿಜೆಪಿಯ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.
ಕೇವಲ ಬಿಜೆಪಿ ಮಾತ್ರವಲ್ಲದೇ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಹಲವು ಪರ-ವಿರೋಧ ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಸಿದ್ದರಾಮಯ್ಯನವರ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 
SCROLL FOR NEXT