ಬೆಂಗಳೂರು: ಐಪಿಎಲ್ ಪ್ರಿಯರಿಗೆ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಕಾಟ ಶುರುವಾಗಿದ್ದು, ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಆಗಮಿಸಿದ್ದ ಪ್ರೇಕ್ಷಕರ 15 ಬೈಕ್‍ಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಇಲ್ಲಿಯವರೆಗೂ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು ನಡೆದಿದ್ದು, ಈ ಮೂರು ಪಂದ್ಯಗಳ ಅವಧಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 15 ಬೈಕ್ ಪ್ರಕರಣಗಳು ದಾಖಲಾಗಿವೆಯಂತೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಳೆದ 3 ಪಂದ್ಯಗಳ ವೇಳೆ ಈ ಘಟನೆ ನಡೆದಿದ್ದು, ಅಭಿಮಾನಿಗಳು ಕಬ್ಬನ್ ಪಾರ್ಕ್ ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್‌ಸಿಬಿ ಪಂದ್ಯಗಳನ್ನು ನೋಡಲು ತೆರಳಿದ್ದಾಗೆ ಬೈಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಪ್ರಮುವಾಗಿ ಕಳೆದ ಭಾನುವಾರ ನಡೆದ ಆರ್ ಸಿಬಿ- ಚೆನ್ನೈ ಮ್ಯಾಚ್ ನೋಡಲು ಹೋಗಿದ್ದ ಪ್ರೇಕ್ಷಕರ ಹಲವು ಬೈಕ್ ಗಳು ಕಳ್ಳತನವಾಗಿದೆ. ಪ್ರೇಕ್ಷಕರು ಅತ್ತ ಬೈಕ್ ಪಾರ್ಕ್ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಇತ್ತ ಬೈಕ್ ಕಳ್ಳರು ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಕಳೆದ 3 ಪಂದ್ಯಾವಳಿಗಳು ಸೇರಿ ಕಳ್ಳರು ಒಟ್ಟು 15 ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ.
ಪೊಲೀಸರು ಅಭಿಪ್ರಾಯಪಟ್ಟಿರುವಂತೆ ಕಳ್ಳರ ಪಾಲಿಗೆ ಐಪಿಎಲ್ ದೊಡ್ಡ ಅವಕಾಶವಾಗಿ ಮಾರ್ಪಟ್ಟಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖರ್ತನಾಕ್ ಕಳ್ಳರು ಬೈಕ್ ಗಳನ್ನೇ ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಗಂಭೀರವಾಗಿರುವ ಪೊಲೀಸರು ಐಪಿಎಲ್ ಪಂದ್ಯಾವಳಿ ವೇಳೆ ಕಬ್ಬನ್ ಪಾರ್ಕ್ ನಲ್ಲಿ ಹೆಚ್ಚುವರಿ ಸಿಬ್ಬಂದಿಗಳ ಹಾಕಲು ಚಿಂತನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಇನ್ನು ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಸಿಬ್ಬಂದಿ ಹೊಂದಾಣಿಕೆ ಕಷ್ಟ ಎಂಬ ಮಾತುಗಳೂ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics