ಬೆಂಗಳೂರು: ಬಿಡಿಎ ಆನ್ ಲೈನ್ ತೆರಿಗೆ ಪಾವತಿ ವ್ಯವಸ್ಥೆಗೆ ಚಾಲನೆ
ಬೆಂಗಳೂರು: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ) ಫ್ಲಾಟ್ ಹಾಗೂ ಸೈಟ್ ಮಾಲೀಕರು ಇನ್ನು ಮುಂದೆ ಆನ್ ಲೈನ್ ನಲ್ಲಿಯೇ ತೆರಿಗೆ ಪಾವತಿ ಮಾಡಬಹುದು. ಬಿಡಿಎ ತನ್ನ ವೆಬ್ ಸೈಟ್ ನಲ್ಲಿ ಸರಳ ಪ್ರಕಟಣೆಯ ಮೂಲಕ ನೂತನ ಸೇವೆಯನ್ನು ಪರಿಚಯಿಸಲಾಗಿದೆ.
"ಬುಧವಾರದಿಂದಲೇ ಆನ್ ಲೈನ್ ಮೂಲಕ ತೆರಿಗೆ ಪಾವತಿ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದು ಆನ್ ಲೈನ್ ಪೋರ್ಟಲ್ ಮೂಲಕ ತೆರಿಗೆ ಪಾವತಿಗೆ ಕೇವಲ ಎರಡು ನಿಮಿಷದ ಕಾಲಾವಧಿ ಸಾಕಾಗಲಿದೆ. ಬುಧವಾರ ರಾತ್ರಿ 10.30 ರ ವೇಳೆಗೆ ಒಟ್ಟು 21 ಮಂದಿ ಆನ್ ಲೈನ್ ಮೂಲಕ ತೆರಿಗೆ ಪಾವತಿ ಮಾಡಿದ್ದಾರೆ. ಇದರಲ್ಲಿ ಒಟ್ಟಾರೆ 1,21,138 ರೂ. ಸಂಗ್ರಹವಾಗಿದೆ" ಬಿಡಿಎ ಕಾರ್ಯದರ್ಶಿ ಬಸವರಾಜು ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿಗಾಗಿ www.bdabangalore.org ಗೆ ಭೇಟಿ ನೀಡಿ ಅಲ್ಲಿನ ರೆಡ್ ಸ್ಕ್ರೋಲ್ ಬಾರ್ ಕ್ಲಿಕ್ ಮಾಡಿ ತೆರಿಗೆ ಪಾವತಿಸಬಹುದು. ಅಲ್ಲದೆ ಇದ್ದರೆ ವೆಬ್ ಸೈಟ್ ನ ಮುಖಪುಟದಲ್ಲಿ ’ಹೊಸತು’ ವಿಭಾಗದಲ್ಲಿ ಬರುವ 'ಆಸ್ತಿ ತೆರಿಗೆ ಪಾವತಿ' ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
ತೆರಿಗೆ ಪಾವತಿಗೆ ನೊಂದಣಿ ಸಹ ಬಹಳ ಸರಳವಾಗಿದೆ. ಸೈಟ್ ನಂಬರ್, ಆಸ್ತಿಯ ಐಡಿ ಸಂಖ್ಯೆ, ನಿಮ್ಮ ಪೂರ್ಣ ಹೆಸರನ್ನು ಭರ್ತಿ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ಈ ಮೇಲ್ ನೀಡಿ ವೆರಿಫೈ ಮಾಡಿಸಿಕೊಳ್ಳಬೇಕು.ಆಗ ಒನ್ ಟೈಮ್ ಪಾಸ್ ವರ್ಡ್ ಸಂದೇಶ ನಿಮ್ಮ ಮೊಬೈಲ್ ಹಾಗೂ ಈ ಮೇಲ್ ಗೆ ಬರುತ್ತದೆ. ಇದಾದ ಬಳಿಕ ನಿಮ್ಮ ಆಸ್ತಿ ದಾಖಲೆಗಳ ನವೀಕರಣ (ಅಪ್ ಡೇಟ್) ಆಗಲಿದೆ.ಒಟಿಪಿ ದಾಖಲಿಸುವ ಮೂಲಕ ಆಸ್ತಿ ಮಾಲಿಕರು ತಾವು ಆನ್ ಲೈನ್ ತೆರಿಗೆ ಪಾವತಿ ಮಾಡಬಹುದು.
ಬಿಬಿಎಂಪಿ ಆನ್ ಲೈನ್ ತೆರಿಗೆ ಪಾವತಿ ಕ್ರಮ ಸಾಮಾನ್ಯ್ವಾದದ್ದು, ಇದೀಗ ಬಿಡಿಎ ವ್ಯಾಪ್ತಿಯ ಸ್ವತ್ತುಗಳ ಆನ್ ಲೈನ್ ತೆರಿಗೆ ಪಾವತಿ ವ್ಯವಸ್ಥೆ ಕಲ್ಪಿಸಿರುವುದು ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos